Advertisement

ಎನ್‌ಡಿಎ ಗೆಲ್ಲಲಿದೆ; ಸರ್ಕಾರ ರಚಿಸಲಿದೆ

12:30 AM Mar 07, 2019 | Team Udayavani |

ಬಿಹಾರದ ಪ್ರಮುಖ ನಾಯಕ, ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಬಿಜೆಪಿ ಮತ್ತು ಜೆಡಿಯು ಜತೆಗೆ ಸ್ಥಾನ ಹೊಂದಾಣಿಕೆಯಲ್ಲಿ ಗೆದ್ದಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಗೆದ್ದು ಮತ್ತೆ ಸರ್ಕಾರ ರಚಿಸಲಿದೆ ಎಂದು ಹೇಳಿ ದ್ದಾರೆ.  ಪಾಸ್ವಾನ್‌ ಅವರು ಟೈಮ್ಸ್‌ ಆಫ್ ಇಂಡಿಯಾ ಪತ್ರಿಕೆಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ…

Advertisement

ಬಾಲಕೋಟ್‌ನಲ್ಲಿ ಐಎಎಫ್ ನಡೆಸಿದ ದಾಳಿ ಮುಂದಿನ ಲೋಕಸಭೆ ಚುನಾವಣೆ,  ವಿಶೇಷವಾಗಿ ಎನ್‌ಡಿಎ ಮೇಲೆ ಪ್ರಭಾವ ಬೀರೀತೆ?  
ಈ ವಿಚಾರ ಚುನಾವಣೆಗೆ ಸಂಬಂಧಿಸಿದ್ದೇ ಅಲ್ಲ. ಅದನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ಜನರಿಗೆ ಬಿಟ್ಟ ವಿಚಾರ ವಾಗಿದೆ. ದೇಶವನ್ನು ರಕ್ಷಿಸುವುದು ಸರ್ಕಾರದ ಕೆಲಸ ಮತ್ತು ಕರ್ತವ್ಯ. 

ಬಿಹಾರದಲ್ಲಿ ಎನ್‌ಡಿಎ ಪಾಲುದಾರ ಪಕ್ಷಗಳ ನಡುವೆ ಸ್ಥಾನ ಹೊಂದಾಣಿಕೆ ಮಾಡುವಾಗ ಆರಂಭದಲ್ಲಿ ಕೊಂಚ ವ್ಯತ್ಯಾಸ ಕಂಡು ಬಂದಂತೆ ಇತ್ತು. ಈಗ ಯಾವ ಅಂಶ ನಿಮಗೆ ಅನುಕೂಲವಾಗಿದೆ?
ಬಿಹಾರದಲ್ಲಿ ಸ್ಥಾನ ಹೊಂದಾಣಿಕೆ ಸೌಹಾರ್ದಯುತವಾಗಿ ಬಗೆಹರಿದಿದೆ. ಆರಂಭದಲ್ಲಿ ಉಂಟಾಗಿದ್ದ ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳಲಾಗಿದೆ.

ಯಾವ ಕ್ಷೇತ್ರಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದೀರಿ?
2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ನಮ್ಮ ಪಕ್ಷ 6 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. ಈ ಬಾರಿಯೂ ಕೂಡ ಅಷ್ಟೇ ಸಂಖ್ಯೆಯ ಸ್ಥಾನಗಳಿಗೆ ಸ್ಪರ್ಧಿಸಲಿದ್ದೇವೆ.

ಮುಂದಿನ ಚುನಾವಣೆಯಲ್ಲಿ ಎನ್‌ಡಿಎ ಗೆದ್ದು ಸರ್ಕಾರ ರಚಿಸುವುದೇ? ಬಿಹಾರದಲ್ಲಿ ಮತ್ತು ದೇಶದ ಇತರ ಭಾಗಗ ಳಲ್ಲಿ ಮೈತ್ರಿಕೂಟಕ್ಕೆ ಎಷ್ಟು ಸ್ಥಾನಗಳು ಸಿಗುವ ನಿರೀಕ್ಷೆ ಇದೆ?
ಎಸ್‌ಸಿ, ಎಸ್‌ಟಿ, ಒಬಿಸಿ, ಸಾಮಾನ್ಯ ವರ್ಗ ಸೇರಿದಂತೆ ಸಮಾಜದ ಎಲ್ಲಾ ವರ್ಗಗಳು ಎನ್‌ಡಿಎ ಜತೆಗೆ ಇವೆ. ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡ ನಿರ್ಧಾರಗಳು ಈ ಬದಲಾವಣೆಗೆ ಕಾರಣವಾಗಿದೆ. ಬಿಹಾರದ ಎಲ್ಲಾ 40 ಸ್ಥಾನಗಳಲ್ಲಿ ಎನ್‌ಡಿಎ ಗೆಲ್ಲಲಿದೆ ಮತ್ತು ಮುಂದಿನ ಬಾರಿಯೂ ನಾವೇ ಸರ್ಕಾರ ರಚಿಸಲಿದ್ದೇವೆ.

Advertisement

ಶಾಸಕ ಜಿಗ್ನೇಶ್‌ ಮೇವಾನಿ, ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಮೊದಲಾದ ಯುವ ನಾಯಕರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಅವರೆಲ್ಲ ತಾತ್ಕಾಲಿಕ ನಾಯಕರು. ಅವರೆಲ್ಲ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳಂತೆ. ಆರಂಭದಲ್ಲಿ ತಾವೇ ಹೆಚ್ಚು ಎಂದು ಭಾವಿಸಿಕೊಳ್ಳುತ್ತಾರೆ. ಕೊನೆಯ ವರ್ಷಕ್ಕೆ ಬಂದಾಗ ಅವರಿಗೆ ತಾವೇನೂ ಅಲ್ಲ ಎಂದು ಅರಿವಾಗಿರುತ್ತದೆ. 

ಬಿಹಾರದಲ್ಲಿನ ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರದ ಬಗ್ಗೆ ನಿಮ್ಮ ಮಾತೇನು? ವಿಶೇಷವಾಗಿ ಕಾನೂನು ಮತ್ತು ಸುವ್ಯವಸ್ಥೆ ಹೇಗಿದೆ?
ಎನ್‌ಡಿಎ ಮೈತ್ರಿಕೂಟಕ್ಕೆ ನಿತೀಶ್‌ಕುಮಾರ್‌ ಪುನರಾಗಮನದ ಬಳಿಕ ಬಿಹಾರದಲ್ಲಿ ಅಭಿವೃದ್ಧಿಯ ದಾರಿ ಸರಾಗವಾಗಿದೆ. ಸರ್ಕಾರದ ಮೇಲೆ ಇರುವ ವಿಶ್ವಾಸ ವೃದ್ಧಿಯಾಗಿದೆ. ಇನ್ನು ಕಾನೂನು ಮತ್ತು ಸುವ್ಯಸ್ಥೆ ಬಗ್ಗೆ ಹೇಳುವುದಿದ್ದರೆ ಮುಖ್ಯಮಂತ್ರಿ ಅದರ ಬಗ್ಗೆ ಯಾವತ್ತೂ ಗರಿಷ್ಠ ಪ್ರಾಧಾನ್ಯತೆ ನೀಡುತ್ತಾರೆ. 

ರಾಜ್ಯಸಭೆ ಚುನಾವಣೆಗೆ ನೀವು ಸ್ಪರ್ಧಿಸುವುದಾದರೆ, ಹಾಜೀಪುರ ಕ್ಷೇತ್ರದಿಂದ ಯಾರು ಸ್ಪರ್ಧಿಸುತ್ತಾರೆ?
ಹೌದು. ನಾನು ರಾಜ್ಯಸಭೆ ಚುನಾವಣೆಗೆ ಸ್ಪರ್ಧೆ ಮಾಡುವೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಈಗಾಗಲೇ ಘೋಶಣೆ ಮಾಡಿದ್ದಾರೆ. ಹಾಜೀಪುರ ಕ್ಷೇತ್ರದಿಂದ ಯಾರು ಸ್ಪರ್ಧೆ ಮಾಡಬೇಕು ಎಂಬ ವಿಚಾರದ ಬಗ್ಗೆ ಪಕ್ಷ ನಿರ್ಧರಿಸಲಿದೆ. ಪುತ್ರ ಚಿರಾಗ್‌ ಪಾಸ್ವಾನ್‌, ಪತ್ನಿ ಸ್ಪರ್ಧಿಸಬೇಕು ಎಂದು ಕಾರ್ಯಕರ್ತರ ಒತ್ತಾಯವಿದೆ.

(ಕೃಪೆ- ದ ಟೈಮ್ಸ್‌ ಆಫ್ ಇಂಡಿಯಾ)

Advertisement

Udayavani is now on Telegram. Click here to join our channel and stay updated with the latest news.

Next