Advertisement
ರಾಷ್ಟ್ರಪತಿ ಅಥವಾ ಉಪರಾಷ್ಟ್ರಪತಿ ಸ್ಥಾನದ ಚುನಾವಣಾ ಪ್ರಕ್ರಿಯೆ ಆರಂಭವಾಗುವುದಕ್ಕೆ ಮೊದಲು ಎನ್‌ಡಿಎ ವಲಯದಲ್ಲಿ ನಾಯ್ಡು ಹೆಸರು ಚಾಲ್ತಿಯಲ್ಲಿತ್ತು. ಇದೀಗ ಅದರಂತೆಯೇ ಆಗಿ ಹೋಗಿದೆ. ಉಷಾ ಪತಿ (ಸಚಿವ ನಾಯ್ಡು ಪತ್ನಿಯವರ ಹೆಸರು) ವೆಂಕಯ್ಯ ನಾಯ್ಡು ಅವರು ಆ.5ರಂದು ನಡೆಯಲಿರುವ ಉಪ-ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಅವರು ಮಂಗಳವಾರ ಬೆಳಗ್ಗೆ 11ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ನವದೆಹಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆಯ ಬಳಿಕ ಪಕ್ಷದ ಅಧ್ಯಕ್ಷ ಅಮಿತ್ ಶಾ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಈ ಮಾಹಿತಿ ನೀಡಿದರು. ಎನ್‌ಡಿಎ ಪಾಲುದಾರ ಪಕ್ಷಗಳ ಜತೆಗೆ ಈ ಬಗ್ಗೆ ಚರ್ಚೆ ನಡೆಸಿಯೇ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
Related Articles
Advertisement
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಅತ್ಯಂತ ಆಪ್ತರಾಗಿರುವುದೂ ಕೂಡ ಎಂ. ವೆಂಕಯ್ಯನಾಯ್ಡು ಅವರಿಗೆ ಧನಾತ್ಮಕವಾಗಿಯೂ ಪರಿಣಮಿಸಿದೆ. ಹಾಲಿ ಕೇಂದ್ರ ಸಚಿವ ಸಂಪುಟದಲ್ಲಿ ನಾಯ್ಡು ಐದನೇ ಹಿರಿಯ ಸಚಿವರಾಗಿದ್ದಾರೆ. ಪ್ರಧಾನವಾಗಿರುವ ಋಣಾತ್ಮಕ ಅಂಶವೆಂದರೆ ಹಿಂದಿನ ಹಲವು ಸಂದರ್ಭಗಳಲ್ಲಿ ಪ್ರತಿಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ್ದಾಗ ಅವರನ್ನು ಪ್ರಬಲವಾಗಿಯೇ ಸಮರ್ಥನೆ ಮಾಡಿಕೊಂಡು ಮಾತನಾಡುತ್ತಿದ್ದರು. ನಾಯ್ಡು ಉಪರಾಷ್ಟ್ರಪತಿಯಾಗುವುದರಿಂದ ಸರ್ಕಾರಕ್ಕೆ ಕೊಂಚ ಹಿನ್ನೆಡೆಯಾಗಬಹುದೆಂದು ವಿಶ್ಲೇಷಿಸಲಾಗುತ್ತದೆ.
ನಾಯ್ಡು ವ್ಯಕ್ತಿಚಿತ್ರ– ಮುಪ್ಪಾವರಪು ವೆಂಕಯ್ಯ ನಾಯ್ಡು ಹುಟ್ಟಿದ್ದು 1949 ಜು.1
– 1973ರಲ್ಲಿ ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌ಗೆ ಸೇರ್ಪಡೆ. 1972ರಲ್ಲಿ ನಡೆದ ಜೆ çಆಂಧ್ರ ಚಳವಳಿಯಲ್ಲಿ ನಾಯಕನಾಗಿ ಹೊರಹೊಮ್ಮಿದ ನಾಯ್ಡು
– 1975ರಲ್ಲಿ ತುರ್ತು ಪರಿಸ್ಥಿತಿ ವೇಳೆ ಜೈಲು ವಾಸ
– 1980-1985ರ ವರೆಗೆ ಯುವ ಮೋರ್ಚಾ ಅಧ್ಯಕ್ಷ
– 1978-1985 – 2 ಬಾರಿ ಹಿಂದಿನ ಆಂಧ್ರಪ್ರದೇಶ ಶಾಸಕರಾಗಿ ಆಯ್ಕೆ
– 1999ರಲ್ಲಿ ವಾಜಪೇಯಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ
– 2002 -2004 ಬಿಜೆಪಿ ಅಧ್ಯಕ್ಷ
– 2005- ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ
– 2004- ಮೋದಿ ಸಂಪುಟದಲ್ಲಿ ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನೆ, ಸಂಸದೀಯ ಮತ್ತು ವಾರ್ತಾ ಪ್ರಸಾರ ಖಾತೆ ಸಚಿವ
ಪತ್ನಿ ಉಷಾ
ಇಬ್ಬರು ಮಕ್ಕಳು
ವಿದ್ಯಾಭ್ಯಾಸ- ಆಂಧ್ರ ವಿವಿಯ ಕಾನೂನು ಕಾಲೇಜಿನಿಂದ ಕಾನೂನು ಪದವಿ