Advertisement
ಎಸ್ಪಿ ನಾಯಕರು ಮೋಜಿಗಾಗಿ ಬರುತ್ತಾರೆ: ಸಿಎಂ ಯೋಗಿ ಟಾಂಗ್ಅಜಂಗಢ್: ಸಮಾಜವಾದಿ ಹಾಗೂ ವಿಪಕ್ಷದ ನಾಯಕರು ಅಜಂಗಢ್ಗೆ ಕೇವಲ ಮೋಜಿಗಾಗಿ ಬರುತ್ತಾರೆ. ಲೋಕಸಭೆ ಚುನಾವಣೆ ನಂತರ ಪ್ರವಾಸಕ್ಕೆಂದು ಇಂಗ್ಲೆಂಡ್ಗೆ ಹೋಗುತ್ತಾರೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಎಸ್ಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ. ಚುನಾವಣೆ ರ್ಯಾಲಿಯಲ್ಲಿ ಮಾತನಾಡಿದ ಅವರು, ಮೊದಲು ಅಜಂಗಢ್ ಭಯೋತ್ಪಾದನೆಯ ಕೇಂದ್ರವಾಗಿತ್ತು. ದೇಶದಲ್ಲಿ ಎಲ್ಲೆ ಬಾಂಬ್ ನ್ಪೋಟವಾದರೂ, ಅಜಂಗಢ್ದ ಹೆಸರು ಕೇಳಿ ಬರುತ್ತಿತ್ತು. ಆದರೆ, ಈಗ ಭಯೋತ್ಪಾದನೆ ಪ್ರಕರಣಗಳು ಕಡಿಮೆ ಆಗಿವೆ. ಕೇವಲ ಪಟಾಕಿ ನ್ಪೋಟವಾದರೂ, ಪಾಕಿಸ್ತಾನ ಇದನ್ನು ನಾವು ಮಾಡಿಲ್ಲ ಎಂದು ಸ್ಪಷ್ಟನೆ ನೀಡಲು ಹಾತೊರೆಯುತ್ತಾರೆ ಎಂದು ಹೇಳಿದರು.