Advertisement

ಸಂಸತ್ತಿನ ಮಳೆಗಾಲದ ಅಧಿವೇಶನ: 26ರ ಬದಲು 18 ದಿನಕ್ಕೆ ಇಳಿಕೆ

07:24 PM Jun 25, 2018 | udayavani editorial |

ಹೊಸದಿಲ್ಲಿ : ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಮಳೆಗಾಲದ ಲೋಕಸಭಾ ಅಧಿವೇಶನವನ್ನು ಜುಲೈ 18ರಿಂದ ಆಗಸ್ಟ್‌ 10ರ ವರೆಗೆ ನಡೆಸಲು ನಿರ್ಧರಿಸಿದೆ. ಆದರೆ ಮಳೆಗಾಲದ ಅಧಿವೇಶನ ಸಂಪ್ರದಾಯದ ಪ್ರಕಾರ 26 ದಿನಗಳ ಕಾಲ ನಡೆಯಬೇಕಿದ್ದು ಅದನ್ನು  18 ದಿನಗಳಿಗೆ ಇಳಿಸಿರುವ ಎನ್‌ಡಿಎ ಸರಕಾರಕ್ಕೆ  ಸಂಸತ್‌ ಅಧಿವೇಶನದ ಬಗ್ಗೆ ಯಾವುದೇ ಗಂಭೀರತೆ ಇಲ್ಲ ಎಂದು ಟಿಎಂಸಿ ನಾಯಕ  ಡೆರಿಕ್‌ ಓ ಬ್ರಿàನ್‌ ಆರೋಪಿಸಿದ್ದಾರೆ.

Advertisement

ಈ ಬಾರಿಯ ಸಂಸತ್ತಿನ ಮಳೆಗಾಲದ ಅಧಿವೇಶನದ ವೇಳಾ ಪಟ್ಟಿಯನ್ನು ಪ್ರಕಟಿಸಿರುವ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್‌ ಅವರು ಸಂಸತ್‌ ಅಧಿವೇಶನ ಅವಧಿಯನ್ನು ಕಡಿತಗೊಳಿಸಲಾಗಿರುವುದನ್ನು 2010 ಮತ್ತು  2011ಕ್ಕೆ ಹೋಲಿಸಿದ್ದಾರೆ. 

ಆದರೆ ವಾಸ್ತವದಲ್ಲಿ 2010 ಮತ್ತು 2011ರಲ್ಲಿ ಮಳೆಗಾಲದ ಅಧಿವೇಶನ 26 ದಿನಗಳ ಕಾಲ ನಡೆದಿತ್ತು. ಇದೀಗ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅದನ್ನು 26ರಿಂದ 18 ದಿನಗಳಿಗೆ ಇಳಿಸುವ ಮೂಲಕ ಸಂಸದೀಯ ಕಲಾಪಗಳ ಬಗ್ಗೆ ತಾನು ಯಾವುದೇ ಗಂಭೀರತೆ ಹೊಂದಿಲ್ಲದಿರುವುದನ್ನು ತೋರಿಸಿಕೊಟ್ಟಿದೆ ಎಂದು ಡೆರಿಕ್‌ ಓ ಬ್ರಿàನ್‌ ಹೇಳಿದರು.

ರಾಷ್ಟ್ರಪತಿ ರಾಮ ನಾಥ್‌ ಕೋವಿಂದ್‌ ಅವರು ಸಂಸದೀಯ ಅಧಿವೇಶನವನ್ನು ಔಪಚಾರಿಕವಾಗಿ ನಡೆಸುವರು. 

Advertisement

Udayavani is now on Telegram. Click here to join our channel and stay updated with the latest news.

Next