Advertisement

ಟೈಮ್ಸ್‌ ನೌ- ಸಿ ವೋಟರ್‌ ಸಮೀಕ್ಷೆ: ಬಿಹಾರದಲ್ಲಿ ಮತ್ತೆ ಎನ್‌ಡಿಎಗೆ ಜಯ

03:54 PM Oct 13, 2020 | keerthan |

ನವದೆಹಲಿ/ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಕೂಟ 243 ಸ್ಥಾನಗಳ ಪೈಕಿ160 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ. ಬಿಜೆಪಿಗೆ 85 ಸ್ಥಾನಗಳು ಲಭಿಸಿ ಅತಿದೊಡ್ಡ ಪಕ್ಷವಾಗುವ ಸಂಭವ ಇದೆ ಎಂದು “ಟೈಮ್ಸ್‌ ನೌ’ ಇಂಗ್ಲಿಷ್‌ ಸುದ್ದಿವಾಹಿನಿ ಮತ್ತು “ಸಿ- ವೋಟರ್‌’ ಸಂಸ್ಥೆ ನಡೆಸಿದ ಸಮೀಕ್ಷೆ ತಿಳಿಸಿದೆ.

Advertisement

ಜೆಡಿಯುಗೆ 70 ಸ್ಥಾನಗಳು ಪ್ರಾಪ್ತವಾಗುವ ಸಾಧ್ಯತೆ ಬಗ್ಗೆ ಸಮೀಕ್ಷೆ ಹೇಳಿಕೊಂಡಿದೆ. ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ122 ಸ್ಥಾನಗಳು ಬೇಕು. ಎನ್‌ಡಿಎಯಿಂದ ಸಿಡಿದು 143 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿರುವ ಎಲ್‌ಜೆಪಿಗೆ ಐದು ಸ್ಥಾನಗಳು ಬರುವ ಸಂಭವ ಇದೆ. ಆರ್‌ಜೆಡಿ-ಕಾಂಗ್ರೆಸ್‌ ನೇತೃತ್ವದ ಮಹಾ ಮೈತ್ರಿ ಕೂಟಕ್ಕೆ76 ಸ್ಥಾನಗಳು, ಆರ್‌ಜೆಡಿಗೆ 56, ಕಾಂಗ್ರೆಸ್‌ಗೆ 15 ಕ್ಷೇತ್ರಗಳಲ್ಲಿ ಗೆಲುವು ಪ್ರಾಪ್ತವಾಗುವ ಸಾಧ್ಯತೆ ಗಳಿವೆ. ಇತರರಿಗೆ 7 ಕ್ಷೇತ್ರಗಳಲ್ಲಿ ಜಯ ಒಲಿಯುವ ಸಂಭವ ಇದೆ.

ಇದನ್ನೂ ಓದಿ:ಬಿಹಾರ ಚುನಾವಣೆ 2020: ಎಲ್ ಜೆಪಿ ಸೇರ್ಪಡೆ, 6 ವರ್ಷಗಳ ಕಾಲ 9 ಬಿಜೆಪಿ ಮುಖಂಡರ ಉಚ್ಛಾಟನೆ

ತೇಜಸ್ವಿ ವಾಗ್ಧಾನಕ್ಕೆ ಲೇವಡಿ: ಸೂಕ್ತ ಕ್ರಮದಲ್ಲಿ ಸಂಪುಟ ಸಭೆ ನಡೆಸಲು ಬಾರದೇ ಇದ್ದವರು ಹತ್ತು ಲಕ್ಷ ಉದ್ಯೋಗ ನೀಡುವ ವಾಗ್ಧಾನ ಮಾಡಿದ್ದಾರೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ಗೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಲೇವಡಿ ಮಾಡಿದ್ದಾರೆ. ಆರ್‌ಜೆಡಿ ನೇತೃತ್ವದ ಸರ್ಕಾರ ಗೆದ್ದರೆ ಉದ್ಯೋಗದ ವಾಗ್ಧಾನ ಮಾಡಿದ್ದರು. 11 ವಿಧಾನಸಭಾ ಕ್ಷೇತ್ರಗಳಲ್ಲಿ ಆನ್‌ಲೈನ್‌ ಮೂಲಕ ನಡೆಸಿದ ಚುನಾವಣಾ ಪ್ರಚಾರದಲ್ಲಿ ಮಾತನಾಡದ ಅವರು ಹತ್ತು ಲಕ್ಷ ಉದ್ಯೋಗ ನೀಡಿಕೆ ಎನ್ನುವುದು ಸವಾಲಿನ ಕೆಲಸ. ಅವರ ನೇತೃತ್ವದ ಸರ್ಕಾರದಲ್ಲಿ ಸರಿಯಾದ ರೀತಿಯಲ್ಲಿ ಸಂಪುಟ ಸಭೆ ನಡೆಸಲು ತೇಜಸ್ವಿಗೆ ಬರುತ್ತಿರಲಿಲ್ಲ ಎಂದು ಸಿಎಂ ನಿತೀಶ್‌ ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next