Advertisement

Opposition ಮೈತ್ರಿ ಕೂಟದಿಂದ ದೂರ ಉಳಿಯುವ ಸೂಚನೆ ನೀಡಿದ ಒಮರ್ ಅಬ್ದುಲ್ಲಾ

06:21 PM Jun 10, 2023 | Team Udayavani |

ಶ್ರೀನಗರ : ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ವಿರುದ್ಧದ ಮಹಾಮೈತ್ರಿಕೂಟದಿಂದ ದೂರ ಉಳಿಯುವ ಬಗ್ಗೆ ನ್ಯಾಶನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಶನಿವಾರ ಸುಳಿವು ನೀಡಿದ್ದಾರೆ, 370 ನೇ ವಿಧಿಯನ್ನು ರದ್ದುಪಡಿಸಿದಾಗ ಹೆಚ್ಚಿನ ಪಕ್ಷಗಳು ಮೌನವಾಗಿದ್ದವು ಎಂದು ಮೈತ್ರಿಕೂಟದ ಪಕ್ಷಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

Advertisement

ಗಡಿ ಜಿಲ್ಲೆ ರಜೌರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,2024ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ವಿರುದ್ಧ ನ್ಯಾಷನಲ್ ಕಾನ್ಫರೆನ್ಸ್ ಇತರೆ ಪಕ್ಷಗಳೊಂದಿಗೆ ಕೈಜೋಡಿಸುವ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ ಮಾಜಿ ಮುಖ್ಯಮಂತ್ರಿ ಪ್ರತಿಕ್ರಿಯಿಸಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ಪೂರ್ವ ಮೈತ್ರಿ ಕುರಿತ ಚರ್ಚೆಯು ಕೇಂದ್ರಾಡಳಿತ ಪ್ರದೇಶದಲ್ಲಿನ ವಿಧಾನಸಭಾ ಚುನಾವಣೆ ಮಾಡುವ ಮೊದಲು ಅಕಾಲಿಕವಾಗಿರುತ್ತದೆ ಎಂದು ಹೇಳಿದರು.

“ಜಮ್ಮು ಮತ್ತು ಕಾಶ್ಮೀರದ ಹೊರಗೆ ಕೊಡಲು ನಾವು ಏನು ಹೊಂದಿದ್ದೇವೆ? ನಮಗೆ ಒಟ್ಟು ಐದು ಲೋಕಸಭೆ ಸ್ಥಾನಗಳಿವೆ ಮತ್ತು ಈ ಸ್ಥಾನಗಳು ಯಾವ ಬಿರುಗಾಳಿಯನ್ನು ಸೃಷ್ಟಿಸಬಹುದು? ನಾವು ಈ ಸ್ಥಾನಗಳಲ್ಲಿ ಬಿಜೆಪಿ ವಿರುದ್ಧ ಹೋರಾಡಬೇಕಾಗಿದೆ ಮತ್ತು ಜೆ & ಕೆ ಹೊರಗೆ ಏನು ನಡೆಯುತ್ತಿದೆ ಎಂಬ ಪ್ರಶ್ನೆ ಎರಡನೇಯದ್ದಾಗಿದೆ” ಎಂದರು.

“ಬಲವಂತಗಳನ್ನು ಬದಿಗಿಟ್ಟು, ಪಕ್ಷ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಅಂತಹ ಮೈತ್ರಿಯಿಂದ ಯಾವುದೇ ಪ್ರಯೋಜನವನ್ನು ನಾನು ಕಾಣುವುದಿಲ್ಲ. ಅವರಿಗೆ ಬೇಕಾದಾಗ  ನಮ್ಮ ಬಾಗಿಲು ಬಡಿಯುತ್ತಾರೆ ಎಂದು ನಾನು ಪದೇ ಪದೇ ಹೇಳುತ್ತಿದ್ದೇನೆ. ಕೇಜ್ರಿವಾಲ್ ತೊಂದರೆಯಲ್ಲಿದ್ದಾಗ, ಅವರಿಗೆ ನಮ್ಮ ಬೆಂಬಲ ಬೇಕು ಆದರೆ 2019 ರಲ್ಲಿ ನಾವು ದೊಡ್ಡ ಮೋಸವನ್ನು ಎದುರಿಸಿದಾಗ ಈ ನಾಯಕರು ಎಲ್ಲಿದ್ದರು, ”ಎಂದು ಅವರು ಕೇಂದ್ರ ಸರ್ಕಾರ ಆರ್ಟಿಕಲ್ 370 ರ ರದ್ದತಿ ಮತ್ತು ಜೆ & ಕೆ ಅನ್ನು ಕಾಶ್ಮೀರ ಮತ್ತು ಲಡಾಖ್ ಆಗಿ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಬಗ್ಗೆ ಉಲ್ಲೇಖಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next