Advertisement

NCP; ಶರದ್‌ ಪವಾರ್‌ ಪಕ್ಷ ಇನ್ನು ಎನ್‌ಸಿಪಿ ಶರದ್‌ಚಂದ್ರ ಪವಾರ್‌

12:16 AM Feb 08, 2024 | Team Udayavani |

ಹೊಸದಿಲ್ಲಿ: ಹಿರಿಯ ರಾಜಕಾರಣಿ, ನ್ಯಾಶನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿಯ ಸ್ಥಾಪಕ ಶರದ್‌ ಪವಾರ್‌ ಪಕ್ಷಕ್ಕೆ ಚುನಾವಣ ಆಯೋಗ ಹೊಸ ಹೆಸರು ನೀಡಿದೆ. ಶರದ್‌ ಪಕ್ಷಕ್ಕೆ “ನ್ಯಾಶನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ ಶರದ್‌ಚಂದ್ರ ಪವಾರ್‌’ ಎಂಬ ಹೊಸ ಹೆಸರು ನೀಡಲಾಗಿದೆ.

Advertisement

ಶರದ್‌ ಪವಾರ್‌ ಸೋದರಳಿಯ ಅಜಿತ್‌ ಪವಾರ್‌ ನೇತೃತ್ವದ ಬಣವೇ ನಿಜವಾದ ಎನ್‌ಸಿಪಿ ಎಂದು ಆಯೋಗ ಪರಿಗಣಿಸಿ, ಗಡಿಯಾರದ ಚಿಹ್ನೆಯನ್ನು ಅಜಿತ್‌ ಬಣಕ್ಕೆ ನೀಡಿದ ಬಳಿಕ ಈ ಬೆಳವ ಣಿಗೆಯಾಗಿದೆ. ಮಹಾರಾಷ್ಟ್ರ ದಿಂದ ರಾಜ್ಯ ಸಭೆಯ 6 ಸ್ಥಾನಗಳಿಗಾಗಿ ಮುಂಬರುವ ಚುನಾವಣೆಯ ಉದ್ದೇಶಕ್ಕಾಗಿ ನಿಮ್ಮ ಬಣದ ಹೆಸರನ್ನು ಸ್ವೀಕರಿಸಲಾಗಿದೆ ಎಂದು ಚುನಾವಣ ಆಯೋಗ ತಿಳಿಸಿದೆ.

“ಎನ್‌ಸಿಪಿ ಶರದ್‌ಚಂದ್ರ ಪವಾರ್‌’ ಪಕ್ಷಕ್ಕೆ ಚುನಾವಣ ಆಯೋಗ ಇನ್ನೂ ಚಿಹ್ನೆ ನೀಡಿಲ್ಲ. ಆದರೆ ಮೂಲಗಳ ಪ್ರಕಾರ, ಆಲದ ಮರದ ಚಿಹ್ನೆ, ತಮಿಳು ನಾಡಿನ ಆಡಳಿತ ಪಕ್ಷ ಡಿಎಂಕೆಯ ಸೂರ್ಯ ಉದಯಿಸುತ್ತಿ ರುವ ಚಿಹ್ನೆ ಯನ್ನು ಅಥವಾ ಇಂಡಿ ಯನ್‌ ಲೋಕ ದಳ(ಐಎನ್‌ಲ್‌ಡಿ) ಪಕ್ಷದ ಕನ್ನಡಕದ ಚಿಹ್ನೆಯನ್ನು ಸ್ವಲ್ಪ ಬದ ಲಾಯಿಸಿಕೊಂಡು ಪಕ್ಷದ ಚಿಹ್ನೆಯಾಗಿ ಆರಿಸಲು ಶರದ್‌ಗೆ ಚುನಾವಣ ಆಯೊಗ ಸೂಚಿಸಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next