Advertisement

ಮಹಾಘಟಬಂಧನ್‌ ಬಗ್ಗೆ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅನುಮಾನ !

12:12 PM Jun 27, 2018 | |

ಮುಂಬಯಿ: 2019ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ವಿರೋಧಿ ಪಕ್ಷಗಳ ಒಕ್ಕೂಟ “ಮಹಾಘಟಬಂಧನ್‌’ ಇದರ ರಚನೆಯ ಬಗ್ಗೆ ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ಶರದ್‌ ಪವಾರ್‌ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.  

Advertisement

ಮಾಧ್ಯಮಗಳಲ್ಲಿ ಈ ಸಂಬಂಧ ಹಲವು ಬಗೆಯ ಊಹಾಪೋಹಗಳು ಹರಿದಾಡುತ್ತಿವೆ, ಬಿಜೆಪಿ ಸರಕಾರವನ್ನು ಹಣಿಯಲು ವಿಪಕ್ಷಗಳ ಬಳಿ ಉಳಿದಿ ರುವ ಪರ್ಯಾಯ ಮುಖವಾಗಿ ಮಹಾ ಘಟಬಂಧನ್‌ ಬಗ್ಗೆ ಹಲವಾರು ರೀತಿಯ ಬರಹಗಳು ಪ್ರಕಟವಾಗಿವೆ. 

ಆದರೆ ನನಗೆ ಅಂತಹ ಯಾವುದೇ ಸಾಧ್ಯತೆಗಳು ಕಾಣಲು ಸಿಗುತ್ತಿಲ್ಲ. ನನ್ನ ಸ್ನೇಹಿತ ರಲ್ಲಿ ಕೆಲವರು ಅದನ್ನು ಬಯಸಿದ್ದಾರೆ. ಆದರೆ, ಅದು ಪ್ರಾಯೋಗಿಕವಲ್ಲ  ಎಂದು ಪವಾರ್‌  ಸಿಎನ್‌ಎನ್‌-ನ್ಯೂಸ್‌ 18 ಟಿವಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಚುನಾವಣೆಗಳ ಅನಂತರ ಪ್ರಾದೇಶಿಕ ಪಕ್ಷಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬ ಸಂಕೇತವನ್ನು ನೀಡಿದ ಅವರು, ನನ್ನ ವೈಯಕ್ತಿಕ ಆಲೋಚನೆ ಮತ್ತು ಮೌಲ್ಯಮಾಪನದ ಪ್ರಕಾರ ಈ ಚುನಾವಣೆಯಲ್ಲಿ ರಾಜ್ಯವಾರು ಸ್ಪರ್ಧೆ ಉದ್ಭವವಾಗಲಿದೆ. ತಮಿಳುನಾಡಿನಲ್ಲಿ ಡಿಎಂಕೆ ಅತಿದೊಡ್ಡ ಪಕ್ಷವಾಗಲಿದ್ದು, ಇತರ ಬಿಜೆಪಿಯೇತರ ಪಕ್ಷಗಳು ಇದನ್ನು ಒಪ್ಪಿ ಕೊಳ್ಳಬೇಕಾಗುತ್ತದೆ ಎಂದರು.
ಕರ್ನಾಟಕ, ಗುಜರಾತ್‌, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಪಂಜಾಬ್‌ಗಳಲ್ಲಿ ಕಾಂಗ್ರೆಸ್‌ ನಂಬರ್‌ ವನ್‌ ಪಕ್ಷವಾಗಿರು ವುದನ್ನು ನೀವು ಕಾಣುತ್ತೀರಿ. ಆದರೆ, ಆಂಧ್ರ ಪ್ರದೇಶದಲ್ಲಿ ತೇಲುಗು ದೇಶಂ ನಂಬರ್‌ ವನ್‌ ಪಕ್ಷ ಎಂಬುವುದನ್ನು ನೀವು ಒಪ್ಪಿಕೊಳ್ಳಬೇಕಾಗುತ್ತದೆ. ಅಂತೆಯೇ, ತೆಲಂಗಾಣದಲ್ಲಿ  ಕೆ. ಚಂದ್ರಶೇಖರ್‌ ರಾವ್‌ ಒರಿಸ್ಸಾದಲ್ಲಿ ನವೀನ್‌ ಪಟ್ನಾಯಕ್‌, ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ಪ್ರಮುಖ ನಾಯಕರು ಎಂಬುದನ್ನು ನೀವು ಸ್ವೀಕರಿಸಬೇಕು ಎಂದು  ಶರದ್‌ ಪವಾರ್‌ ಅವರು ಹೇಳಿದ್ದಾರೆ. 

ಆಯಾ ರಾಜ್ಯಗಳಲ್ಲಿ ಆಯಾ ಪಕ್ಷಗಳು  ಪ್ರಮುಖ ಶಕ್ತಿಯಾಗಿ ಗುರುತಿಸಿಕೊಂಡಿವೆ. ಆದರೆ ಇದು ಮಹಾಮೈತ್ರಿ ಎನಿಸಿಕೊಳ್ಳುವು ದಿಲ್ಲ ಎಂದವರು ನುಡಿದಿದ್ದಾರೆ. 

Advertisement

ಮುಂಬರುವ ಲೋಕಸಭೆ ಚುನಾ ವಣೆಯು ಬಿಜೆಪಿ ವಿರುದ್ಧ ನಡೆಯಲಿರುವ ಕಾರಣ ಚುನಾವಣೆಯ ಬಳಿಕ ಈ ಎಲ್ಲಾ ನಾಯಕರು ಒಂದಾಗುವ ಸಾಧ್ಯತೆಯಿದೆ. ಆದರೆ, ಅದಕ್ಕೆ ಮೊದಲು ಈ ನಾಯಕರು ಮಹಾಮೈತ್ರಿಕೂಟದ ಹೆಸರಿನಲ್ಲಿ ಆಯಾ ರಾಜ್ಯದಲ್ಲಿ ತಮ್ಮ ವರ್ಚಸ್ಸನ್ನು ಕ್ಷೀಣಿಸಲು ಒಪ್ಪಿಕೊಳ್ಳುತ್ತಾರೆ ಎನ್ನುವುದು  ಅನುಮಾನವಾಗಿದೆ ಎಂದು ಶರದ್‌ ಪವಾರ್‌ ಅಭಿಪ್ರಾಯಪಟ್ಟಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next