Advertisement

ಶೇ.10 ದಂಡ ಪಾವತಿಸಿ

10:44 PM Jan 04, 2023 | Team Udayavani |

ಹೊಸದಿಲ್ಲಿ: ಟೆಕ್‌ದೈತ್ಯ ಗೂಗಲ್‌ ಮೇಲೆ ಭಾರತದ ಸ್ಪರ್ಧಾತ್ಮಕ ಆಯೋಗ (ಸಿಸಿಐ) ವಿಧಿಸಿರುವ 1,337.76 ಕೋಟಿ ರೂ.ದಂಡದಲ್ಲಿ, ಶೇ.10ರಷ್ಟು ದಂಡ ಪಾವತಿಸುವಂತೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಬುಧವಾರ ಗೂಗಲ್‌ ಸಂಸ್ಥೆಗೆ ನಿರ್ದೇಶಿಸಿದೆ.

Advertisement

ಸಿಸಿಐ ವಿಧಿಸಿದ್ದ ದಂಡ ವನ್ನು ಪ್ರಶ್ನಿಸಿ ಗೂಗಲ್‌ ಸಲ್ಲಿಸಿದ್ದ ಅರ್ಜಿ ಯನ್ನು ಎನ್‌ಸಿಎಲ್‌ಎಟಿಯ ದ್ವಿಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.  ಗೂಗಲ್‌ ವಿರುದ್ಧದ ಆಯೋಗ ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳ ವಿರುದ್ಧ  ಮಧ್ಯಂತರ ತಡೆ ಕೋರಿದ್ದ ಗೂಗಲ್‌ ಮನವಿಯನ್ನು ನ್ಯಾಯ ಮಂಡಳಿ ನಿರಾಕರಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಫೆ.13ರಂದು ನಡೆಯಲಿದೆ.

ಆ್ಯಂಡ್ರಾಯ್ಡ ಮೊಬೈಲ್‌ ಎಕೋಸಿ ಸ್ಟಮ್‌ಗಳಲ್ಲಿ ಗೂಗಲ್‌ ತನ್ನ ಪ್ರಾಬ ಲ್ಯವನ್ನು ದುರುಪಯೋಗ ಪಡಿಸಿಕೊ ಳ್ಳುತ್ತಿದೆ. ಇದರಿಂದ ಭಾರತೀಯ ಮೊಬೈಲ್‌ ಬಳಕೆದಾರರಿಗೆ ಸಮಸ್ಯೆ ಯಾ ಗುವುದಲ್ಲದೆ, ಅಂಥ ಸಾಧನಗಳ ಬೆಲೆಯೂ ದುಬಾರಿಯಾಗುತ್ತಿದೆ ಎಂದು ಸಿಸಿಐ ಗೂಗಲ್‌ಗೆ ದಂಡ ವಿಧಿಸಿತ್ತು. ಆದರೆ, ಗೂಗಲ್‌ ಪರ ವಕೀಲ ಮನುಸಿಂ Ì,  ಸಿಸಿಐ ಮಾಡಿ ರುವಂಥ ಯಾವುದೇ ಆರೋಪಗಳು ಕಂಡು ಬಂದಿಲ್ಲ ಎಂದಿದ್ದಾರೆ. ಜತೆಗೆ 2018ರಲ್ಲಿ ಗೂಗಲ್‌ ವಿರುದ್ಧ ಐರೋಪ್ಯ ಒಕ್ಕೂಟ ನೀಡಿದ್ದ ತೀರ್ಪು ಗಳನ್ನೇ ಸಿಸಿಐ ನಕಲು ಮಾಡಿ, ತೀರ್ಪು ನೀಡಿದೆ. ಆರೋಪ ಸಾಬೀತು ಪಡಿಸುವ ಅಂಶಗಳನ್ನು ಉಲ್ಲೇಖೀಸಿಲ್ಲ ಎಂದು ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next