Advertisement
ಇದರಿಂದಾಗಿ ಈ ಕುರಿತು ವಿದ್ಯಾರ್ಥಿಗಳು, ಪಾಲಕ-ಪೋಷಕರು ಹಾಗೂ ಶಿಕ್ಷಕರಲ್ಲಿ ಎದ್ದಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ಹೊಸ ಪಠ್ಯಕ್ರಮದಿಂದಾಗಿ ರಾಷ್ಟ್ರಮಟ್ಟದಲ್ಲಿ ರಾಜ್ಯದ ವಿದ್ಯಾರ್ಥಿಗಳು ಸ್ಪರ್ಧೆ ಮಾಡಲು ಅನುಕೂಲವಾಗಲಿದೆ.
Related Articles
Advertisement
ಏಳು ಮಾಧ್ಯಮದಲ್ಲಿ ಪಠ್ಯ: ಪಠ್ಯಪುಸ್ತಕ ಸೊಸೈಟಿಯಿಂದ ಎನ್‌ಸಿಇಆರ್‌ಟಿ ಪಠ್ಯಪುಸ್ತವನ್ನು ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲಗು, ಮರಾಠಿ ಹಾಗೂ ಉರ್ದು ಹೀಗೆ ಏಳು ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ವಿಜ್ಞಾನ ಹಾಗೂ ಗಣಿತ ಪುಸ್ತಕವನ್ನು ಮುದ್ರಿಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಆಯಾ ಮಾಧ್ಯಮದ ಪುಸ್ತಕವನ್ನು ಅಭ್ಯಾಸ ಮಾಡಬಹುದಾಗಿದೆ. ಸೊಸೈಟಿಯಿಂದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ನಂತರ ಪುಸ್ತಕವನ್ನು ಆನ್‌ಲೈನ್ ಮೂಲಕವೇ ಡೌನ್‌ಲೋಡ್ ಮಾಡಿಕೊಳ್ಳಬಹುದು.
2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಹಾಗೂ ಗಣಿತ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಏಳು ಭಾಷೆಯಲ್ಲಿ ಮುದ್ರಣ ಮಾಡುತ್ತಿದ್ದೇವೆ. ಇಲಾಖೆ ನೀಡಿರುವ ಸಂಖ್ಯೆಗೆ ಅನುಗುಣವಾಗಿ ಮುದ್ರಣಕಾರ್ಯ ನಡೆಯುತ್ತಿದೆ. ಅತಿಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ.-ನರಸಿಂಹಯ್ಯ, ರಾಜ್ಯ ಪಠ್ಯಪುಸ್ತಕ ಸೊಸೈಟಿ, ವ್ಯವಸ್ಥಾಪಕ ನಿರ್ದೇಶಕ. ರಾಜ್ಯ ಪಠ್ಯಕ್ರಮದ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಎನ್‌ಸಿಇಆರ್‌ಟಿ ಪಠ್ಯಕ್ರಮ ಅಳವಡಿಸುವಂತೆ ಏಳೆಂಟು ವರ್ಷದಿಂದ ಇಲಾಖೆಯಲ್ಲಿ ಬೇಡಿಕೆ ಇಟ್ಟಿದ್ದೇವೆ. ಕರ್ನಾಟಕದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಎನ್‌ಸಿಇಆರ್‌ಟಿ ಪಠ್ಯ ಅವಶ್ಯಕ. ರಾಜ್ಯ ಪಠ್ಯಕ್ರಮ ಪರಿಷ್ಕರಣೆಯೂ ವ್ಯವಸ್ಥಿತವಾಗಿ ಮಾಡಬೇಕು.
-ಡಿ.ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ * ರಾಜು ಖಾರ್ವಿ ಕೊಡೇರಿ