Advertisement

ಎನ್‌ಸಿಇಆರ್‌ಟಿ ಪಠ್ಯಕ್ರಮ ಅರ್ಧದಷ್ಟು ಇಳಿಕೆ: ಜಾಬ್ಡೇಕರ್‌

07:30 AM Feb 25, 2018 | |

ಹೊಸದಿಲ್ಲಿ: ಕೇಂದ್ರೀಯ ವಿದ್ಯಾಲಯಗಳಲ್ಲಿ ಕಲಿಯುವ ಶಾಲಾ ಮಕ್ಕಳಿಗೆ ಮುಂದಿನ ವರ್ಷದಿಂದ ಪಠ್ಯದ ಹೊರೆ ಅರ್ಧದಷ್ಟು ಇಳಿಕೆಯಾಗಲಿದೆ ಎಂಬ ಸಿಹಿ ಸುದ್ದಿಯನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾಬ್ಡೇಕರ್‌ ನೀಡಿದ್ದಾರೆ.

Advertisement

ರಾಜ್ಯಸಭಾ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, “ಕೇಂದ್ರೀಯ ವಿದ್ಯಾಲಯಗಳ ತರಗತಿಗಳ ಪಠ್ಯವು ಬಿಎ, ಬಿಕಾಂ ಪಠ್ಯಕ್ಕೆ ಸರಿ ಸಮಾನವಾಗಿವೆ. ಇವು ಮಕ್ಕಳಿಗೆ ಭಾರವಾಗಿ ಪರಿಣಮಿಸುತ್ತಿವೆ. ಈ ಪಠ್ಯದ ಹೊರೆಯನ್ನು ಅರ್ಧದಷ್ಟು ಇಳಿಸುವಂತೆ ಕೇಂದ್ರೀಯ ವಿದ್ಯಾಲಯಗಳಿಗೆ ಪಠ್ಯ ರೂಪಿಸುವ ಎನ್‌ಸಿಇಆರ್‌ಟಿಗೆ ಸೂಚಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪಠ್ಯದ ಹೊರೆ ಕಡಿಮೆಯಾಗಲಿದೆ’ ಎಂದಿದ್ದಾರೆ. ಪಠ್ಯವು ಮಕ್ಕಳ ಮನಸ್ಸಿಗೆ ಹೊರೆಯಾಗುವುದನ್ನು ತಪ್ಪಿಸುವ ಮೂಲಕ ಅವರ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಬೇಕೆಂಬುದು ಇದರ ಹಿಂದಿನ ಉದ್ದೇಶ ಎಂದು ವಿವರಿಸಿದ್ದಾರೆ.

ಇದಲ್ಲದೆ, ಮಾರ್ಚ್‌ನಲ್ಲಿ ನಡೆಯುವ ಪರೀಕ್ಷೆಯಲ್ಲಿ ನಪಾಸಾಗುವ ವಿದ್ಯಾರ್ಥಿಗೆ ಮೇ ತಿಂಗಳಲ್ಲಿ ಪೂರಕ ಪರೀಕ್ಷೆ ಬರೆಯುವ ವ್ಯವಸ್ಥೆ ನೀಡಲು, ಶಿಕ್ಷಕರ ಬೋಧನಾ ಗುಣಮಟ್ಟ  ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಕೇಂದ್ರ ಸರಕಾರದ ಹೊಸ ಶೈಕ್ಷಣಿಕ ನೀತಿಯ ರೂಪು ರೇಷೆಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ ಗೊಳಿಸಲು ಯತ್ನಿಸಲಾಗುವುದು ಎಂದು ತಿಳಿಸಿದರು.

ಈ ಎಲ್ಲ ಅಂಶಗಳಿರುವ ಮಸೂದೆಯನ್ನು ಹಾಲಿ ನಡೆಯುತ್ತಿರುವ ಬಜೆಟ್‌ ಅಧಿವೇಶನದ ಮುಂದಿನ ಭಾಗದಲ್ಲೇ ಮಂಡಿಯಲು ನಿರ್ಧರಿಸಲಾಗಿದೆ ಎಂದು ಸಚಿವ ಪ್ರಕಾಶ್‌ ಜಾಬ್ಡೇಕರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next