Advertisement

ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕಾಪಾಡಲು ಎನ್‌ಸಿಇಆರ್‌ಟಿ ನೀತಿ

09:52 PM Sep 11, 2022 | Team Udayavani |

ನವದೆಹಲಿ: ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಆಯೋಗ) ಶಾಲಾ ಮಕ್ಕಳ ಮಾನಸಿಕ ಆರೋಗ್ಯವನ್ನು ಕಾಪಾಡಲು ಮಾರ್ಗದರ್ಶಿ ಸೂತ್ರವೊಂದನ್ನು ಬಿಡುಗಡೆ ಮಾಡಿದೆ. ಮಾನಸಿಕ ಆರೋಗ್ಯ ಸಲಹಾ ಸಮಿತಿಯನ್ನು ರಚಿಸುವುದು, ಶಾಲಾಧಾರಿತ ಮಾನಸಿಕ ಆರೋಗ್ಯ ಕಾರ್ಯಕ್ರಮಗಳನ್ನು ಸಿದ್ಧಪಡಿಸುವುದು, ಶಿಕ್ಷಣಶಾಸ್ತ್ರೀಯ ಬೆಂಬಲವೊದಗಿಸುವುದು ಈ ನೀತಿಯಲ್ಲಿದೆ.

Advertisement

ಮಕ್ಕಳು, ಹದಿಹರೆಯದ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದಲ್ಲಿ ಉಂಟಾಗುವ ಏರುಪೇರುಗಳನ್ನು ಆರಂಭದಲ್ಲೇ ಗುರುತಿಸಬೇಕೆನ್ನುವುದು ಈ ನೀತಿಯ ಉದ್ದೇಶ. ಶಾಲಾಮಕ್ಕಳ ಮಾನಸಿಕ ಆರೋಗ್ಯದ ಕುರಿತು ಸಮೀಕ್ಷೆಯೊಂದು ನಡೆದಿತ್ತು. ಅದರ ವರದಿ ಕಳೆದ ವಾರ ಪ್ರಕಟವಾಗಿತ್ತು. ಅದರಲ್ಲಿ ಮಾನಸಿಕ ಆರೋಗ್ಯ ಏರುಪೇರಾಗಲು ಪರೀಕ್ಷೆಗಳು, ಫ‌ಲಿತಾಂಶಗಳು, ವಿಪರೀತ ಒತ್ತಡ ಇವೆಲ್ಲ ಮುಖ್ಯ ಕಾರಣ ಎನ್ನಲಾಗಿತ್ತು. ಇದೇ ಹಿನ್ನೆಲೆಯಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಲಾಗಿದೆ.

ಹೊಸ ನೀತಿಯ ಪ್ರಕಾರ, ಪ್ರತಿ ಶಾಲೆ ಅಥವಾ ಶಾಲಾ ಸಮೂಹಗಳು ಮಾನಸಿಕ ಆರೋಗ್ಯ ಸಲಹಾ ಸಮಿತಿಯನ್ನು ರಚಿಸಬೇಕಾಗಿದೆ. ಇದರಲ್ಲಿ ಪ್ರಾಂಶುಪಾಲರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಸದಸ್ಯರಾಗಿರಬೇಕು. ಇದರ ಮಕ್ಕಳು ಜಾಗೃತಿ ಮೂಡಿಸಬೇಕೆಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next