Advertisement

ಬಾನಂಗಳಕ್ಕೆ ಎನ್‌.ಸಿ.ಸಿ. ಏರ್‌ವಿಂಗ್‌ ಕೆಡೆಟ್‌ಗಳ ಲಗ್ಗೆ

01:29 AM Jan 28, 2020 | Sriram |

ಮಹಾನಗರ: ವೈರಸ್‌- ಮೈಕ್ರೊ ಲೈಟ್‌ ಏರ್‌ಕ್ರಾಫ್ಟ್‌ ಉಡ್ಡಯನ ದಲ್ಲಿ ಸುಮಾರು ಎರಡು ದಶಕಗಳಿಂದ ಕರಾವಳಿಯ ಹೊಂಬಣ್ಣದ ಧೂಳಿನಲ್ಲಿ ಬೆವರಿಳಿಸಿ ವ್ಯಾಯಾಮ ಮಾಡುತ್ತಿರುವ ಎನ್‌.ಸಿ.ಸಿ. ಏರ್‌ವಿಂಗ್‌ ಪ್ರೌಢ ಶಾಲಾ ತರಬೇತು ತಂಡ ಇತ್ತೀಚಿನ ದಿನಗಳಲ್ಲಿ ಮಿಂಚಿನ ಪ್ರಗತಿ ಕಂಡಿದ್ದು, ಬಾನೆತ್ತರಕ್ಕೆ ನೆಗೆದು ಎಲ್ಲರ ಗಮನ ಸೆಳೆದಿದೆ.

Advertisement

ಕರ್ನಾಟಕದ 6 ವಿವಿಧ ವಿಭಾಗಗಳಿಂದ ಹಲವು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭವ್ಯ ಭವಿಷ್ಯದ ಕನಸುಗಳನ್ನು ಪೋಣಿಸಿ, ಉಡ್ಡಯನದ ಅಸಾಧಾರಣ ಪ್ರತಿಭೆಯನ್ನು ಒರೆಗೆ ಹಚ್ಚಲು, ತಮ್ಮ ತರಬೇತಿ ಶಿಬಿರಗಳಲ್ಲಿ ಪ್ರಯತ್ನಿಸಿದ್ದಾರೆ.

ಕೊಡಿಯಾಲಬೈಲ್‌ನ ಸಂತ ಅಲೋ ಶಿಯಸ್‌ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಕೆಡೆಟ್‌ ಸ್ಟೀವ್‌, ಜೋಶಲ್‌, ಜಿಯಾ, ಜನನಿ ಹಾಗೂ ಶೈನಾ ಅವರು ಸಂಸ್ಥೆಯ ಎನ್‌.ಸಿ.ಸಿ. ಎ.ಎನ್‌.ಒ. ಸುನಿಲ್‌ ಲೋಬೋ ಅವರ ಮಾರ್ಗದರ್ಶನದಲ್ಲಿ, ಮೂಡುಬಿದಿರೆ ಆಳ್ವಾಸ್‌ ಎಂಜಿನಿಯರಿಂಗ್‌ ಕಾಲೇಜು ಮೈದಾನಿನಲ್ಲಿ ನಡೆಯುತ್ತಿರುವ ವಾರ್ಷಿಕ ಎನ್‌.ಸಿ.ಸಿ. ತರಬೇತಿ ಶಿಬಿರದಲ್ಲಿ ಉಡ್ಡಯನದ ಅನುಭವಗಳನ್ನು ಪಡೆದಿದ್ದಾರೆ.

ಈ ಬಾರಿ ಉಡ್ಡಯನ ತರಬೇತಿ ಯೊಂದಿಗೆ, ಯುವ ಪ್ರತಿಭೆಗಳನ್ನು ಜಗತ್ತಿಗೆ ಪರಿಚಯಿಸುವ ಉನ್ನತ ಕಾರ್ಯ ಕರಾವಳಿಯ ಈ ಶಿಬಿರದಲ್ಲಿ ಯಶಸ್ವಿಗೊಳ್ಳುವ ನಿರೀಕ್ಷೆ ಇದ್ದು, ಈ ದಿಶೆಯಲ್ಲಿ ಪ್ರಯತ್ನ ನಡೆದಿದೆ.

ಅತ್ಯಂತ ಕಿರಿಯ ಮಯಸ್ಸಿನಲ್ಲಿ ತಮಗೆ ದೊರೆತ ಅವಕಾಶ ಹಾಗೂ ಪ್ರೋತ್ಸಾಹಕ್ಕೆ ವಾಯುದಳದ ತರಬೇತುದಾರ ಗ್ರೂಪ್‌ ಕಮಾಂಡರ್‌ ಕರ್ನಲ್‌ ಎ.ಕೆ. ಶರ್ಮಾ ಮತ್ತು ತಂಡಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತ, ಉಡ್ಡಯನದ ಅವಿಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

Advertisement

ಇದು ಎಳವೆಯಲ್ಲಿ ಎನ್‌.ಸಿ.ಸಿ. ಏರ್‌ವಿಂಗ್‌ ಯುವ ಪ್ರತಿಭೆಗಳಿಗೆ ನೀಡುತ್ತಿರುವ ಅಪೂರ್ವ ಅವಕಾಶವಾಗಿದೆ ಹಾಗೂ ಸಶಕ್ತ ಪ್ರತಿಭೆಗಳನ್ನು ಎಳವೆಯಲ್ಲಿಯೇ ಈ ಮೂಲಕ ಗುರುತಿಸಿ, ಭವಿಷ್ಯದ ವಿಭಾಗಗಳಿಗೆ ಆರಿಸಲು ಇದೊಂದು ಸದವಕಾಶ ಎಂದು ತರಬೇತುದಾರರು ಹಾಗೂ ಹೆತ್ತವರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next