Advertisement

ಕರ್ನಾಟಕ-ಗೋವಾ ಘಟಕಕ್ಕೆ ಎನ್‌ಸಿಸಿ ನವ ಸೈನಿಕ್‌ ಕಿರೀಟ

12:36 PM Oct 23, 2018 | Team Udayavani |

ಬೆಂಗಳೂರು: ಕಾರವಾರದಲ್ಲಿ ನಡೆದ ಅಖೀಲ ಭಾರತೀಯ ನವ ಸೈನಿಕ್‌ ಶಿಬಿರ-2018ರಲ್ಲಿ ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ಘಟಕ ಚಾಂಪಿಯನ್‌ ಕಿರಿಟ ಮುಡಿಗೇರಿಸಿಕೊಂಡಿದೆ.

Advertisement

ಅ.14ರಿಂದ 22ರವರೆಗೆ ನಡೆದ ಶಿಬಿರದಲ್ಲಿ ದೇಶದ ವಿವಿಧ ಭಾಗದ 17 ಎನ್‌ಸಿಸಿ ಘಟಕದ 600 ಎನ್‌ಸಿಸಿ ಕೆಡೆಟ್‌ ಭಾಗವಹಿಸಿದ್ದರು. ಶಿಬಿರದಲ್ಲಿ ಶಿಪ್‌ ಮೊಡೆಲಿಂಗ್‌, ಬೋಟ್‌ ಪುಲ್ಲಿಂಗ್‌, ಸೆಮಾಫೋರ್‌, ಫೈರಿಂಗ್‌ ಸಹಿತವಾಗಿ ಹಲವು ಸ್ಪರ್ಧೆ ಏರ್ಪಡಿಸಲಾಗಿತ್ತು. 

ಎಲ್ಲ ಸ್ಪರ್ಧೆಗಳಲ್ಲಿ ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ಘಟಕ ಸಾಂ ಕ ಜಯ ಸಾಧಿಸಿ, ಚಾಂಪಿಯನ್‌ ಎನಿಸಿಕೊಂಡಿದೆ. ತಮಿಳುನಾಡು, ಪಾಂಡಿಚೇರಿ, ಅಂಡಾಮನ್‌ ನಿಕೋಬಾರ್‌ ಘಟಕ ಎರಡನೇ ಸ್ಥಾನ ಮತ್ತು ಪಂಜಾಬ್‌, ಹರಿಯಾಣ, ಹಿಮಾಚಲ ಪ್ರದೇಶ ಹಾಗೂ ಚಂಡಿಘಡ್‌ ಘಟಕ ಮೂರನೇ ಸ್ಥಾನ ಪಡೆದುಕೊಂಡಿದೆ.

ಎನ್‌ಸಿಸಿ ಕರ್ನಾಟಕ ಮತ್ತು ಗೋವಾ ವಲಯದ ಉಪ ಮಹಾ ನಿರ್ದೇಶಕ ಬ್ರಿಗೇಡಿಯರ್‌ ಡಿ.ಎಂ.ಪುರ್ವಿಮಠ, ಕಾರವಾರದ ರೇರ್‌ ಅಡ್ಮಿರಲ್‌ ಕೆ.ಜೆ.ಕುಮಾರ್‌ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next