ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ತಳುಕು ಹಾಕಿಕೊಂಡಿದ್ದ ಡ್ರಗ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಸಿಬಿ ಅಧಿಕಾರಿಗಳು ಇಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಸುಮಾರು 30 ಸಾವಿರ ಪುಟಗಳಷ್ಟಿರುವ ಚಾರ್ಜ್ ಶೀಟನ್ನು ಎನ್ ಸಿಬಿ ಮುಖ್ಯಸ್ಥ ಸಮೀರ್ ವಾಂಖೆಡೆ ಸ್ವತಃ ಸಲ್ಲಿಕೆ ಮಾಡಲಿದ್ದಾರೆ.
ಈ ಪ್ರಕರಣ ದೇಶದಲ್ಲಿ ಭಾರಿ ಸುದ್ದಿ ಮಾಡಿತ್ತು. ಸುಶಾಂತ್ ಸಿಂಗ್ ಸಾವಿನ ಬಳಿಕ ಹಲವಾರು ಡ್ರಗ್ ಪ್ರಕರಣಗಳು ಬೆಳಕಿಗೆ ಬಂದಿತ್ತು. ಇದೇ ಪ್ರಕರಣದಲ್ಲಿ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಸುಮಾರು ಒಂದು ತಿಂಗಳ ಕಾಲ ಜೈಲು ವಾಸ ಅನುಭವಿಸಿದ್ದರು.
ಇದನ್ನೂ ಓದಿ:ಅಭಿಮಾನಿಗಳ ಹಬ್ಬಕ್ಕೆ ದಿನಗಣನೆ: ತರುಣ್ ಬಿಚ್ಚಿಟ್ಟರು ರಾಬರ್ಟ್ ಸೀಕ್ರೇಟ್!
ಚಾರ್ಜ್ ಶೀಟ್ ನಲ್ಲಿ ಎನ್ ಸಿಬಿಯು ಒಟ್ಟು 33 ಜನರ ಹೆಸರನ್ನು ಸೇರಿಸಲಾಗಿದೆ. ಪ್ರಕರಣದಲ್ಲಿ ಎನ್ ಸಿಬಿಯು ಹಲವಾರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿತ್ತು.
ಕಳೆದ ವರ್ಷದ ಜೂನ್ ನಲ್ಲಿ ನಟ ಸುಶಾಂತ್ ಸಿಂಗ್ ತಮ್ಮ ಬಾಂದ್ರಾ ನಿವಾಸದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಾವಿನ ಬಳಿಕ ಬಾಲಿವುಡ್ ನಲ್ಲಿ ನೆಪೊಟಿಸಂ ಕುರಿತಂತೆ ದೊಡ್ಡ ಮಟ್ಟದ ಚರ್ಚೆಯಾಗಿತ್ತು. ಬಳಿಕ ಪ್ರಕರಣಕ್ಕೆ ಡ್ರಗ್ ನಂಟು ಅಂಟಿಕೊಂಡಿತ್ತು.
ಇದನ್ನೂ ಓದಿ:ಡ್ರಗ್ಸ್ ನಂಟು: ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಮನೆ ಮೇಲೆ ಪೊಲೀಸ್ ದಾಳಿ, ವಶಕ್ಕೆ