Advertisement

Goa ಡ್ರಗ್ಸ್ ದಂಧೆ: ಒಲಿಂಪಿಕ್ ಪದಕ ವಿಜೇತೆ ರಷ್ಯನ್ ಸೇರಿ ಮೂವರ ಬಂಧನ

02:43 PM Apr 29, 2023 | Team Udayavani |

ಪಣಜಿ: ಎನ್‌ಸಿಬಿ( Narcotics Control Bureau) ಗೋವಾದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ ದಂಧೆಯನ್ನ ಭೇದಿಸಿದ್ದು ಇಬ್ಬರು ರಷ್ಯನ್ನರನ್ನು ಬಂಧಿಸಿದೆ. 1980 ರ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಈಜುಗಾರ್ತಿ,  ಮಾಜಿ ಪೊಲೀಸ್ ಮತ್ತು ಒಬ್ಬ ಭಾರತೀಯನನ್ನ ಬಂಧಿಸಿ ವಿವಿಧ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

Advertisement

ಕಳೆದ ಎರಡು ವಾರಗಳಿಂದ ಎನ್‌ಸಿಬಿಯ ಗೋವಾ ಘಟಕ ಕಾರ್ಯಾಚರಣೆ ನಡೆಸಿದೆ. ರಷ್ಯಾದ ಡ್ರಗ್ ದಂಧೆ ಗೋವಾದ ಅರಂಬೋಲ್ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಸುಳಿವು ಆಧರಿಸಿ, ತನಿಖೆಯನ್ನು ಪ್ರಾರಂಭಿಸಲಾಯಿತು. ಗುಪ್ತಚರ ಮಾಹಿತಿಯ ಪ್ರಕಾರ, ಎಸ್ ವರ್ಗನೋವಾ ಎಂಬ ರಷ್ಯಾದ ಮಹಿಳೆ ವಿದೇಶಿ ಪ್ರಜೆಗಳಿಗೆ ಡ್ರಗ್ಸ್ ಪೂರೈಕೆಯಲ್ಲಿ ತೊಡಗಿಸಿಕೊಂಡಿದ್ದು, ತನಿಖೆಯ ಸಮಯದಲ್ಲಿ, ಆಕಾಶ್ ಎಂಬ ಸ್ಥಳೀಯ ವ್ಯಕ್ತಿಯನ್ನು ಬಂಧಿಸಿ ಪೂರಕ ಮಾಹಿತಿಯನ್ನು ಸಹ ನಾವು ಸ್ವೀಕರಿಸಿದ್ದೇವೆ ಎಂದು ಎನ್‌ಸಿಬಿ ಅಧಿಕಾರಿ ತಿಳಿಸಿದ್ದಾರೆ.

“ಹೆಚ್ಚಿನ ತನಿಖೆಯ ಸಮಯದಲ್ಲಿ, ಆಕಾಶ್ ದೊಡ್ಡ ನೆಟ್‌ವರ್ಕ್‌ನ ಭಾಗವಾಗಿದ್ದಾನೆ ಮತ್ತು ಅವನು ಕಾರ್ಟೆಲ್‌ನ ಕಿಂಗ್‌ಪಿನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಷ್ಯಾದ ವ್ಯಕ್ತಿಯ ನಿರ್ದೇಶನಗಳ ಮೇಲೆ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ” ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next