Advertisement

6 ವರ್ಷಗಳ ಹಿಂದೆಯೇ ನಟಿ ನಯನತಾರಾ-ವಿಘ್ನೇಶ್‌ ಮದುವೆ!

07:32 AM Oct 17, 2022 | Team Udayavani |

ಚೆನ್ನೈ: ದಕ್ಷಿಣ ಭಾರತದ ನಟಿ ನಯನತಾರಾ ತಮ್ಮ ಪ್ರಿಯತಮ ವಿಘ್ನೇಶ್‌ರೊಂದಿಗೆ ಮದುವೆಯಾಗಿ ನಾಲ್ಕೇ ತಿಂಗಳಿಗೆ ಅವಳಿ ಮಕ್ಕಳಿಗೆ ತಾಯಿಯಾಗಿರುವ ವಿಚಾರ ಎಲ್ಲೆಡೆ ಭಾರೀ ಸದ್ದು ಮಾಡಿತ್ತು.

Advertisement

ಬಾಡಿಗೆ ತಾಯಿ ಮೂಲಕ ಮಗು ಪಡೆಯುವುದಕ್ಕೆ ಭಾರತದಲ್ಲಿ ನಿರ್ಬಂಧವಿರುವಾಗ ಈ ಜೋಡಿ ನಿಯಮ ಉಲ್ಲಂಘಿಸಿ ಮಕ್ಕಳನ್ನು ಪಡೆದರೇ ಎನ್ನುವ ಬಗ್ಗೆ ವಿಚಾರಣೆ ಮಾಡುವುದಾಗಿ ತಮಿಳುನಾಡು ಆರೋಗ್ಯ ಸಚಿವರೂ ಹೇಳಿದ್ದರು.

ಆದರೆ ಈ ಬಗ್ಗೆ ಇದೀಗ ದಂಪತಿ ತಮಿಳುನಾಡು ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿದ್ದು, ಅದರಲ್ಲಿ ತಾವು ಆರು ವರ್ಷಗಳ ಹಿಂದೆಯೇ ಕಾನೂನಾತ್ಮಕವಾಗಿ ಮದುವೆಯಾಗಿರುವ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ವಿವಾಹವಾಗಿ 5 ವರ್ಷಗಳ ನಂತರ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆಯಲು ಅವಕಾಶವಿದೆಯಾದ್ದರಿಂದ ನಾವು ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ದಂಪತಿ ಸ್ಪಷ್ಟೀಕರಣ ಕೊಟ್ಟಿದ್ದಾರೆ.

ನಯನತಾರಾ ಅವರ ಅತ್ಯಂತ ಆಪ್ತರೇ ಮಕ್ಕಳನ್ನು ಹೆತ್ತು ಕೊಟ್ಟಿದ್ದಾರೆ. ಚೆನ್ನೈನ ಆಸ್ಪತ್ರೆಯಲ್ಲಿಯೇ ಈ ಹೆರಿಗೆಯಾಗಿದೆ ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next