Advertisement

Nayanthara: “ಮೊಬೈಲ್‌ ಒಡೆದು ಹಾಕ್ತೀನಿ” ಎಂದು ಅಭಿಮಾನಿಗೆ ಲೇಡಿ ಸೂಪರ್‌ ಸ್ಟಾರ್ ಆವಾಜ್

04:20 PM Apr 08, 2023 | Team Udayavani |

ಚೆನ್ನೈ: ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ಅಭಿಮಾನಿಗಳ ಮೇಲೆ ಗರಂ ಆಗಿರುವ ವಿಚಾರಕ್ಕೆ ಚರ್ಚೆಗೆ ಬಂದಿದ್ದಾರೆ.

Advertisement

ನಯನತಾರಾ ಮತ್ತು ಪತಿ ವಿಘ್ನೇಶ್ ಶಿವನ್ ಇತ್ತೀಚೆಗೆ ಕುಂಭಕೋಣಂ ಬಳಿಯ ಕಾಮಾಕ್ಷಿ ಅಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದಂಪತಿಗೆ ದೇವಸ್ಥಾನದ ಭೇಟಿಯಲ್ಲೂ ಅಭಿಮಾನಿಗಳು ಸುತ್ತುವರಿಯುತ್ತಾರೆ ಎನ್ನುವ ಯೋಚನೆ ದಂಪತಿಗೆ ಇರಲಿಲ್ಲ. ತನ್ನ ನೆಚ್ಚಿನ ನಟಿಯನ್ನು ನೋಡಲು ಅಭಿಮಾನಿಗಳು ದೇವಸ್ಥಾನಕ್ಕೆ ಬಂದಿದ್ದಾರೆ. ಸೆಲ್ಫೀ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಇದನ್ನೂ ಓದಿ: ಚಂದಾ ಕೊಚ್ಚರ್,ದೀಪಕ್ ಮತ್ತು ಧೂತ್ ವಿರುದ್ಧ CBI ಚಾರ್ಜ್ ಶೀಟ್

ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿರುವಾಗ ಅಭಿಮಾನಿಯೊಬ್ಬ‌ ಮೊಬೈಲ್ ನಲ್ಲಿ ನಟಿಯ ವಿಡಿಯೋ ಹಾಗೂ ಫೋಟೋ ತೆಗೆದಿದ್ದಾನೆ. ಇದಕ್ಕೆ ಗರಂ ಆದ ನಯನಾತಾರ ಮೊಬೈಲ್‌ ಒಡೆದು ಹಾಕುತ್ತೇನೆ ಎಂದು ಹೇಳಿದ್ದಾರೆ. ಪರಿಸ್ಥಿತಿಯನ್ನರಿತ ಪತಿ ವಿಘ್ನೇಶ್‌ ಅಭಿಮಾನಿಯ ಬಳಿ ಮೊಬೈಲ್‌ ಬಳಸಬೇಡಿ ಎಂದಿದ್ದಾರೆ. ಈ ವೇಳೆ ಅಲ್ಲೇ ಇದ್ದ ಪೊಲೀಸರು ಕೂಡ ಸ್ವಲ್ಪಮಟ್ಟಿಗೆ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಅಟ್ಲಿ ನಿರ್ದೇಶನದ, ಶಾರುಖ್‌ ಅವ ʼಜವಾನ್‌ʼ  ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next