Advertisement

ವಿದ್ಯಾರ್ಥಿಗಳು ಸಾಧ ನೆಯ ಛಲ ರೂಢಿಸಿಕೊಳ್ಳಲಿ

07:16 PM Jan 05, 2020 | Team Udayavani |

ನಾಯಕನಹಟ್ಟಿ: ವಿದ್ಯಾರ್ಥಿಗಳು ಗುರಿ ಸಾಧಿಸುವ ಛಲ ಹೊಂದಿರಬೇಕು ಎಂದು ಸಂಸದ ಎ. ನಾರಾಯಣಸ್ವಾಮಿ ಕರೆ ನೀಡಿದರು.

Advertisement

ಶನಿವಾರ ಪಟ್ಟಣದ ತಿಪ್ಪೇರುದ್ರಸ್ವಾಮಿ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಪ್ರಾಥಮಿಕ ಶಾಲೆ ವತಿಯಿಂದ ಆಯೋಜಿಸಿದ್ದ “ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನ ಅತ್ಯಂತ ಪ್ರಮುಖವಾದ ಘಟ್ಟವಾಗಿದೆ. ಶಾಲೆಯಲ್ಲಿ ಜರುಗುವ ಪ್ರತಿ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಶಾಲೆಯಲ್ಲಿ ಆಚರಿಸುವ ವಿವೇಕಾನಂದ ಜಯಂತಿ, ವಾಲ್ಮೀಕಿ ಜಯಂತಿ, ಸಾವಿತ್ರಿಬಾಯಿ ಪುಲೆ ಜನ್ಮದಿನಾಚರಣೆ ಸೇರಿದಂತೆ ನಾನಾ ಆಚರಣೆಗಳು ವಿದ್ಯಾರ್ಥಿಗಳಲ್ಲಿ ಸ್ಪೂರ್ತಿಯನ್ನು ತುಂಬಬೇಕು. ದೃಢ
ನಿರ್ಧಾರದಿಂದ ಜೀವನದ ಗುರಿಯನ್ನು ನಿರ್ಧರಿಸಿಕೊಳ್ಳಬೇಕು ಎಂದರು.

ಇಲ್ಲಿನ ಪ್ರದೇಶ ತೆಂಗು, ಅಡಿಕೆಯಿಂದ ಸಮೃದ್ಧವಾಗಿತ್ತು. ಆದರೆ ಈಗ ನೀರಿನ ಸಮಸ್ಯೆಯಿಂದ ತೋಟಗಳು ಕಣ್ಮರೆಯಾಗಿವೆ. ಆದರೆ ಇಲ್ಲಿನ ಪ್ರದೇಶದಲ್ಲಿ ಬುದ್ಧಿವಂತರಿಗೆ ಕೊರತೆಯಿಲ್ಲ. ಹೈಕೋರ್ಟ್‌ ನ್ಯಾಯಾಧೀಶರು, ಪೊಲೀಸ್‌ ಅ ಧಿಕಾರಿಗಳು ಸೇರಿದಂತೆ ಮೇಧಾವಿಗಳು ಇಲ್ಲಿ ಉತ್ತಮ ಭವಿಷ್ಯವನ್ನು ಕಂಡುಕೊಂಡಿದ್ದಾರೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಚಿಂತನೆಯನ್ನು ನಡೆಸಬೇಕು. ಇಲ್ಲಿನ ಪ್ರದೇಶದಲ್ಲಿ ಉದ್ಯೋಗಾವಕಾಶಗಳ ಕೊರತೆಯಿದೆ.

ಎಸ್ಸೆಸ್ಸೆಲ್ಸಿ ನಂತರ ದಲಿತ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷಗಳು ಕಳೆದರೂ ಮಹಿಳೆಯರಿಗೆ ಪೂರ್ಣ ಪ್ರಮಾಣದ ಅವಕಾಶಗಳು ದೊರೆಯುತ್ತಿಲ್ಲ.

Advertisement

ಆಧುನಿಕ ಸಮಾಜದಲ್ಲಿ ಮಹಿಳೆಯರ ಶೋಷಣೆ ಹಾಗೂ ಉದಾಸೀನ ಮುಂದುವರಿದಿದೆ. ಹಾಗಾಗಿ ಶಿಕ್ಷಣ ಪಡೆಯುತ್ತಿರುವ ಬಾಲಕಿಯರು ಹೆಚ್ಚಿನ ಅಂಕಗಳನ್ನು ಪಡೆದು ಪ್ರಗತಿ ಸಾಧಿಸಬೇಕು.
ಎಂಎಲ್ಸಿಯಾಗಿ ಇಲ್ಲಿನ ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇತಿಹಾಸ ಸಂಶೋಧಕ ಡಾ| ಬಿ. ರಾಜಶೇಖರಪ್ಪ ಹಾಗೂ ರಾಷ್ಟ್ರಪತಿ ಪದಕ
ಪುರಸ್ಕೃತ, ಶಾಲೆಯ ಹಳೆಯ ವಿದ್ಯಾರ್ಥಿ ಡಿವೈಎಸ್ಪಿ ಜಿ.ಎಂ. ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಓಬಳೇಶ್‌, ಒ. ಮಂಜುನಾಥ್‌, ಬಿಜೆಪಿ ಮಂಡಲ ಅಧ್ಯಕ್ಷ ರಾಮ ರೆಡ್ಡಿ, ಸಂಸ್ಥೆಯ ಅಧ್ಯಕ್ಷ ಕಲ್ಲಪ್ಪರ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಕೆ.ತಿಪ್ಪೇಸ್ವಾಮಿ, ಖಜಾಂಚಿ ರಸೂಲ್‌ ಭಾಷಾ, ನಿರ್ದೇಶಕ ಕೆ. ರುದ್ರಮುನಿಯಪ್ಪ, ಎನ್‌.ಎಂ. ಕೊಟ್ರಯ್ಯ, ಮುಖ್ಯಶಿಕ್ಷಕ ಬಿ. ರಮೇಶ್‌ ಮೊದಲಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next