Advertisement
ಎನ್. ಮಹಾದೇವಪುರ ಗ್ರಾಪಂ ವ್ಯಾಪ್ತಿಯ ಮನಮೈನಹಟ್ಟಿ ಗ್ರಾಮದಲ್ಲಿ ಬುಧವಾರ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಸರಕಾರ ಈಗಾಗಲೇ 100 ದಿನಗಳ ಕೂಲಿ ದಿನಗಳನ್ನು ಒದಗಿಸುವಂತೆ ಆದೇಶ ನೀಡಿದೆ. ಕೊರೊನಾ ಆವರಿಸಿರುವ ಇಂದಿನ ಸಂದರ್ಭದಲ್ಲಿ ಕೂಲಿ ಕಾರ್ಯಗಳು ಸ್ಥಗಿತಗೊಂಡಿವೆ. ಹೀಗಾಗಿ ಎಲ್ಲ ಗ್ರಾಪಂಗಳಲ್ಲಿ ಕೂಲಿ ಕಾರ್ಯ ಆರಂಭಿಸಲಾಗಿದೆ. ಸರಕಾರ ಈಗಾಗಲೇ 100 ಮಾನವ ದಿನಗಳ ಖಾತ್ರಿ ಯೋಜನೆಗೆ ಅನುಮೋದನೆ ನೀಡಿದೆ. ರೈತರು ತಮ್ಮ ಹೊಲಗಳಲ್ಲಿ ರೇಷ್ಮೆ, ಕೃಷಿ ಹೊಂಡ ಸೇರಿದಂತೆ ನಾನಾ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಹೆಚ್ಚುವರಿ 50 ದಿನ ಉದ್ಯೋಗ ನೀಡಬೇಕು ಎಂದು ಗ್ರಾಪಂಗಳ ಒತ್ತಾಯವಾಗಿದೆ. ಸರಕಾರದಿಂದ ಒಪ್ಪಿಗೆ ಬಂದ ನಂತರ ಇದನ್ನು 150 ದಿನಗಳಿಗೆ ಮುಂದುವರಿಸಲಾಗುವುದು. ಬೆಂಗಳೂರಿನಿಂದ ತಮ್ಮ ಹಳ್ಳಿಗಳಿಗೆ ಹಿಂದುರುಗಿದ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವಕಾಶ ನೀಡಬೇಕು. ಅದೇ ಗ್ರಾಮದವರಾಗಿದ್ದರೆ, ಅರ್ಜಿ ನೀಡಿದ ಒಂದೆರಡು ದಿನಗಳಲ್ಲಿ ಕೂಲಿ ಕಾರ್ಯ ನೀಡಬೇಕು ಎಂದು ಹೇಳಿದರು.
Advertisement
ವಲಸೆ ಕಾರ್ಮಿಕರಿಗೆ ಖಾತ್ರಿ ಕೆಲಸ ಕೊಡಿ
01:07 PM May 07, 2020 | Naveen |
Advertisement
Udayavani is now on Telegram. Click here to join our channel and stay updated with the latest news.