- ಮಗನನ್ನು ಕಾಲೇಜಿಗೆ ಬಿಡಲು ತೆರಳುತ್ತಿದ್ದರು
ಉಪ್ಪಳ: ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ವಾಹನ ಅಪಘಾತ ಮರೆಯುವ ಮುನ್ನವೇ ಮತ್ತೆ ಬುಧವಾರ ಮುಂಜಾನೆ ಉಪ್ಪಳ ನಯಾಬಜಾರ್‌ನಲ್ಲಿ ಸಂಭವಿಸಿದ ಭೀಕರ ವಾಹನ ಅಪಘಾತದಲ್ಲಿ ಒಂದೇ ಕುಟುಂಬದ ಮೂವರ ಸಹಿತ ನಾಲ್ವರು ಸಾವಿಗೀಡಾಗಿದ್ದಾರೆ.
Advertisement
ಡಿಸೈರ್ ಸ್ವಿಫ್ಟ್ ಕಾರು ಹಾಗೂ ಕಂಟೈನರ್ ಲಾರಿ ಪರಸ್ಪರ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ದಂಪತಿ, ಪುತ್ರ ಹಾಗೂ ಸ್ನೇಹಿತ ಘಟನಾ ಸ್ಥಳದಲ್ಲೇ ಮೃತಪಟ್ಟರು. ತೃಶ್ಶೂರ್ ಚೇಳಕ್ಕರ ನಿವಾಸಿಗಳಾದ ಡಾ| ರಾಮನಾರಾಯಣ (52), ಪತ್ನಿ ವತ್ಸಲಾ (48), ಪುತ್ರ ರಂಜಿತ್ (20) ಮತ್ತು ರಂಜಿತ್‌ನ ಸ್ನೇಹಿತ ನಿತಿನ್ (20) ಮೃತಪಟ್ಟವರು.
Related Articles
Advertisement
ಅಪಘಾತ ವಲಯರಾಷ್ಟ್ರೀಯ ಹೆದ್ದಾರಿ ಸಾಗುವ ಉಪ್ಪಳ ನಯಾ ಬಜಾರ್ ಪ್ರದೇಶ ಈಗಾಗಲೇ ಹಲವು ಅಪಘಾತಗಳು ಸಂಭವಿಸಿದ ತಾಣ. ಈ ಕಾರಣದಿಂದ ಈ ಪ್ರದೇಶದ ಬಗ್ಗೆ ಸ್ಥಳೀಯರಿಗೆ ಭೀತಿ ಹುಟ್ಟಿಸಿತ್ತು. ಈ ಪ್ರದೇಶಧಿದಲ್ಲಿ ಪದೇ ಪದೇ ಸಂಭವಿಸುತ್ತಿರುವ ವಾಹನ ಅಪಘಾತಗಳನ್ನು ನಿಯಂತ್ರಿಸಲು ವೇಗ ನಿಯಂತ್ರಕ ಸಹಿತ ಇತರ ಕ್ರಮಗಳನ್ನು ಅಳವಡಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಇದುವರೆಗೆ ಈಡೇರಿಲ್ಲ. ಘಟನಾ ಸ್ಥಳಕ್ಕೆ ಕುಂಬಳೆ ಸಿ.ಐ., ಮಂಜೇಶ್ವರ ಎಸ್‌ಧಿಐ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿದ್ದೆಯ ಮಂಪರು
ಕಾರನ್ನು ರಾಮನಾರಾಯಣ ಅವರು ಚಲಾಯಿಸುತ್ತಿದ್ದರೆಂದೂ ಅವರಿಗೆ ನಿದ್ದೆಯ ಮಂಪರು ಆವರಿಸಿರುವುದೇ ಅಪಘಾತಕ್ಕೆ ಕಾರಣವೆಂದು ಶಂಕಿಸಲಾಗಿದೆ. ಅಪಘಾತದಲ್ಲಿ ಕಂಟೈನರ್ ಲಾರಿಗೂ ಹಾನಿಯಾಗಿದೆ. ಕಂಟೈನರ್ ಲಾರಿಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಅಪಘಾತದಿಂದ ರಸ್ತೆಯಲ್ಲಿ ರಕ್ತ ಮಡುಗಟ್ಟಿ ನಿಂತಿದ್ದು ಅಗ್ನಿಶಾಮಕ ದಳದವರು ನೀರನ್ನು ಹಾಯಿಸಿ ರಸ್ತೆ ತೊಳೆದರು. ನೆನಪು ಮಾಸುವ ಮುನ್ನ
ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ವಾಹನ ಅಪಘಾತ ಸಂಭವಿಸುತ್ತಿದ್ದು, ಒಂದು ವಾರದ ಹಿಂದೆ ಅಂದರೆ ಡಿ. 28ರಂದು ಮುಂಜಾನೆ ವಾಹನ ಅಪಘಾತ ಸಂಭವಿಸಿ ಇಬ್ಬರು ಯುವಕರು ಸಾವಿಗೀಡಾಗಿದ್ದರು. ಮೊಗ್ರಾಲ್ ಪುತ್ತೂರು ಕೊಪ್ಪರ ಬಜಾರ್‌ನಲ್ಲಿ ಮುಂಜಾನೆ ಟೂರಿಸ್ಟ್ ಬಸ್ ಹಾಗೂ ಕೋಳಿ ಸಾಗಿಸುತ್ತಿದ್ದ ವ್ಯಾನ್ ಢಿಕ್ಕಿ ಹೊಡೆದು ಇಬ್ಬರು ಸಾವಿಗೀಡಾಗಿದ್ದರು. ಈ ವಾಹನ ಅಪಘಾತದ ಭೀಕರತೆ ಮರೆಯುವ ಮುನ್ನವೇ ಇನ್ನೊಂದು ವಾಹನ ಅಪಘಾತ ಸಂಭವಿಸಿದೆ.