Advertisement

Haryana: 2ನೇ ಬಾರಿಗೆ ಸಿಎಂ ಆಗಿ ಸೈನಿ ಇಂದು ಪ್ರಮಾಣ ವಚನ, ಪ್ರಧಾನಿ, ಬಿಜೆಪಿ ಗಣ್ಯರು ಭಾಗಿ

09:09 AM Oct 17, 2024 | Team Udayavani |

ಪಂಚಕುಲ: ಹರಿಯಾಣ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಬುಧವಾರ ನಯಾಬ್‌ ಸಿಂಗ್‌ ಸೈನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

ಇದರ ಬೆನ್ನಲ್ಲೇ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡನೆ ಮಾಡಿದ್ದು, ಗುರುವಾರವೇ ಸಿಎಂ ಆಗಿ ಅವರು ಪ್ರಮಾಣ ಸ್ವೀಕಾರ ಮಾಡಲಿ­ದ್ದಾರೆ.

ಪಂಚಕುಲದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಗೃಹ ಸಚಿವ ಅಮಿತ್‌ ಶಾ, ಮಧ್ಯಪ್ರದೇಶ ಸಿಎಂ ಮೋಹನ್‌ ಯಾದವ್‌ ಸೇರಿ ಪ್ರಮುಖರು ಭಾಗವಹಿ­ಸಿ­ದ್ದರು.

ಸೈನಿ ಹೆಸರನ್ನು ಹಿರಿಯ ಶಾಸಕರಾದ ಕೃಷ್ಣ ಕುಮಾರ್‌ ಬೇಡಿ ಮತ್ತು ಅನಿಲ್‌ ವಿಜ್‌ ಪ್ರಸ್ತಾವಿಸಿದ್ದು, ಉಳಿದ ಶಾಸಕರು ಒಪ್ಪಿಗೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next