ನವದೆಹಲಿ: ನ್ಯೂಝಿಲ್ಯಾಂಡ್ ಪ್ರವಾಸದಲ್ಲಿರುವ ಭಾರತ ಪುರುಷರ ಕ್ರಿಕೆಟ್ ತಂಡ ಟಿ20 ಮತ್ತು ಏಕದಿನ ಸರಣಿಗಳನ್ನು ಮುಗಿಸಿರುವ ಭಾರತ ಇದೀಗ ಮಹತ್ವದ ಟೆಸ್ಟ್ ಸರಣಿಗೆ ಅಣಿಯಾಗುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ನಡೆದ ತ್ರಿದಿನ ಅಭ್ಯಾಸ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.
ಈ ಗ್ಯಾಪಿನಲ್ಲಿ ಟೀಂ ಇಂಡಿಯಾ ಸದಸ್ಯರು ಲೈಟ್ ಮೊಮೆಂಟ್ ನಲ್ಲಿರುವ ಫೊಟೋ ಒಂದು ಜಾಲತಾಣದಲ್ಲಿ ಹರಿದಾಡುತ್ತಿದೆ. ಕ್ಯಾಪ್ಟನ್ ಕೊಹ್ಲಿ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅದರಲ್ಲಿ ವಿರಾಟ್ ಕೊಹ್ಲಿ, ಮಹಮ್ಮದ್ ಶಮಿ ಮತ್ತು ಯುವ ಬ್ಯಾಟ್ಸ್ ಮನ್ ಪ್ರಥ್ವೀ ಶಾ ಅವರು ಫನ್ನಿ ರೀತಿಯಲ್ಲಿ ಪೋಸ್ ನೀಡಿದ್ದಾರೆ. ಇದಕ್ಕೆ ಕೊಹ್ಲಿ ಅವರು ‘ನಯಾ ಪೋಸ್ಟ್ ನಯಾ ದೋಸ್ತ್’ ಎಂಬ ಶೀರ್ಷಿಕೆ ನೀಡಿದ್ದಾರೆ.
ಕಿವೀಸ್ ವಿರುದ್ಧದ ಟಿ20 ಸರಣಿಯನ್ನು 5-0 ಅಂತರದಿಂದ ವಶಪಡಿಸಿಕೊಂಡ ಬಳಿಕ ಏಕದಿನ ಸರಣಿಯಲ್ಲಿ ಭಾರತ 3-0 ಅಂತರದಿಂದ ಕಿವೀಸ್ ಗೆ ಶರಣಾಗಿತ್ತು. ಇನ್ನು ಟೆಸ್ಟ್ ನಲ್ಲಿ ಆ ಪರಿಸ್ಥತಿ ಬರದೇ ಇರಲೆಂದು ಈ ಮೂವರು ಆಟಗಾರರು ಈ ರೀತಿ ಪೋಸ್ ಕೊಟ್ಟಿರಬಹುದೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.