Advertisement

ನಕ್ಸಲರ ಬಳಿ “ಪೆನ್‌ ಗನ್‌’

10:44 AM Jul 23, 2018 | Team Udayavani |

ಭೋಪಾಲ: ಕಳೆದ ಗುರುವಾರ ಛತ್ತೀಸ್‌ಗಢ‌ದಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಎಂಟು ಮಂದಿ ನಕ್ಸಲೀಯರನ್ನು ಕೊಂದ ಬಳಿಕ, ಪೊಲೀಸರ ಕಣ್ಣು ಸೆಳೆದದ್ದು “ಪೆನ್‌ ಗನ್‌’. ಅಂದರೆ ಪೆನ್‌ನಂತೆಯೇ ಇರುವ ಗನ್‌ ಮತ್ತು ಅದರಲ್ಲಿ ಬಳಸಲಾಗುತ್ತಿದ್ದ ಗುಂಡುಗಳು. ಅಲ್ಲಿ ಸಿಕ್ಕಿದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳಲ್ಲಿ ಈ ಪೆನ್‌ ಗನ್‌ ಪತ್ತೆಯಾಗಿದ್ದು, ನಕ್ಸಲೀಯರ ತಾಂತ್ರಿಕ ವಿಭಾಗ ಅದನ್ನು ಅಭಿವೃದ್ಧಿಪಡಿಸಿರುವ ಸಾಧ್ಯತೆ ಇದೆ ಎಂಬುದು ಪೊಲೀಸರ ಊಹೆ.

Advertisement

ಪೆನ್‌ ಗನ್‌ 9ರಿಂದ 10 ಮೀಟರ್‌ ದೂರದ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ. ಅದರೊಳಗೆ 9 ಎಂ.ಎಂ. ಬುಲೆಟ್‌ಗಳನ್ನೂ ಹಾಕಲಾಗಿದೆ. ಅದನ್ನು ಬಳಸಿಕೊಂಡು ನಕ್ಸಲೀಯರ ಸ್ವಯಂ ಘೋಷಿತ ಕಮಾಂಡರ್‌ ಜೈನಿ ಎಂಬಾಕೆ ಪೊಲೀಸರತ್ತ 2 ಸುತ್ತು ಗುಂಡು ಹಾರಿಸಿದ್ದಳು. ಈ ಗನ್‌ ಪೆನ್‌ನಂತಿರುವ ಕಾರಣ, ಅವುಗಳನ್ನು ರಹಸ್ಯವಾಗಿ ಕೊಂಡೊಯ್ಯಲೂ ತುರ್ತು ಪರಿಸ್ಥಿತಿಯಲ್ಲಿ ಬಳಸಲೂ ಅನುಕೂಲವಾಗುತ್ತದೆ ಎನ್ನು ವುದು ಪೊಲೀಸರ ಪ್ರತಿಪಾದನೆ.ಛತ್ತೀಸ್‌ಗಢದ ದಂತೇವಾಡ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ನಡೆದ ಈ ಕಾರ್ಯಾಚರಣೆ ವೇಳೆ 2 ಇನ್ಸಾಸ್‌, 2.303 ರೈಫ‌ಲ್‌ಗ‌ಳು ಮತ್ತು ಶಾಟ್‌ಗನ್‌ಗಳು ಕೂಡ ಸಿಕ್ಕಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next