Advertisement

ಛತ್ತೀಸ್‌ಗಢದಲ್ಲಿ ಬಸ್ ಸುಟ್ಟು ಹಾಕಿದ ನಕ್ಸಲರು; ಕನಿಷ್ಠ 15 ಜನ ಬಲಿ

08:35 PM Apr 01, 2023 | Team Udayavani |

ದಾಂತೇವಾಡಾ: ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯ ಮಾಲೆವಾಹಿ ಪ್ರದೇಶದಲ್ಲಿ ಮಾರ್ಚ್ 31 ರಂದು ನಕ್ಸಲರ ಗುಂಪೊಂದು ಪ್ರಯಾಣಿಕರ ಬಸ್‌ಗೆ ಬೆಂಕಿ ಹಚ್ಚಿದೆ. ಇತ್ತೀಚಿನ ವರದಿಗಳ ಪ್ರಕಾರ, ದಾಳಿಯಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.

Advertisement

ಬಸ್ ದಾಂತೇವಾಡದಿಂದ ಸುಕ್ಮಾಗೆ ತೆರಳುತ್ತಿದ್ದಾಗ ಮಧ್ಯಾಹ್ನ ಈ ಘಟನೆ ನಡೆದಿದೆ. ಮಾಲೆವಾಹಿ ಬಳಿ ನಕ್ಸಲರು ಬಸ್ ತಡೆದರು. ನಂತರ ಬಸ್‌ಗೆ ಬೆಂಕಿ ಹಚ್ಚಿ, ಯಾರಿಗೂ ತಪ್ಪಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಬೆಂಕಿಯ ಕೆನ್ನಾಲಗೆಯಲ್ಲಿ ಪ್ರಯಾಣಿಕರು ಪರದಾಡುವಂತಾಯಿತು ಎಂದು ವರದಿಯಾಗಿದೆ.

ಘಟನೆಯನ್ನು ರಾಜಕೀಯ ನಾಯಕರು ಖಂಡಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ದಾಳಿಯನ್ನು ಖಂಡಿಸಿದ್ದು, ನಕ್ಸಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವನ್ನೂ ಘೋಷಿಸಿದ್ದಾರೆ.

ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ನಕ್ಸಲೀಯರ ವಿರುದ್ಧ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ” ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next