Advertisement
ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ, ನಾರಾಯಣಪುರ ದಂತೇವಾಡ ಅಂತರ ಜಿಲ್ಲಾ ಗಡಿಯಲ್ಲಿರುವ ಅಭುಜ್‌ಮಾದ್‌ನ ತುಲುತುಲಿ ಮತ್ತು ನೆಂದೂರ್ ಗ್ರಾಮಗಳ ನಡುವಿನ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ಬಸ್ತರ್ ಪ್ರದೇಶದ ಪೊಲೀಸ್ ಮಹಾನಿರೀಕ್ಷಕ ಸುಂದರರಾಜ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಛತ್ತೀಸ್‌ಗಢ ರಾಜ್ಯ ಪೊಲೀಸರ ಜಿಲ್ಲಾ ಮೀಸಲು ಪಡೆ ಮತ್ತು ವಿಶೇಷ ಕಾರ್ಯಪಡೆಯ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಕಾರ್ಯಾಚರಣೆ ವೇಳೆ ಎಕೆ 47 ಮತ್ತು ಸ್ವಯಂ ಲೋಡಿಂಗ್ ರೈಫಲ್ ಸೇರಿದಂತೆ ಶಸ್ತ್ರಾಸ್ತ್ರಗಳ ವಶಪಡಿಸಿಕೊಳ್ಳಲಾಗಿದೆ ಎಂದರು. 185 ನಕ್ಸಲರ ಎನ್‌ಕೌಂಟರ್
ದಾಂತೇವಾಡ ಮತ್ತು ನಾರಾಯಣಪುರ ಸೇರಿ ಒಟ್ಟು ಏಳು ಜಿಲ್ಲೆಗಳ ಒಳಗೊಂಡ ಬಸ್ತಾರ್ ಪ್ರದೇಶದಾದ್ಯಂತ, ಭದ್ರತಾ ಪಡೆಗಳು ಹಾಗೂ ಪೊಲೀಸರೊಂದಿಗಿನ ವಿವಿಧ ಗುಂಡಿನ ಕಾಳಗದಲ್ಲಿ ಕನಿಷ್ಠ 185 ನಕ್ಸಲರ ಎನ್‌ಕೌಂಟರ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಏ.16 ರಂದು ಸಹ, ಕಂಕೇರ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್ ಸಂಘಟನೆಯ ಹಿರಿಯ ನಕ್ಸಲ್ಗಳು ಸೇರಿದಂತೆ 29 ನಕ್ಸಲೀಯರು ಎನ್‌ಕೌಂಟರ್ ಮಾಡಿದ್ದರು.
Related Articles
Advertisement
ನಕ್ಸಲಿಸಂ ಸಂಪೂರ್ಣ ನಿರ್ನಾಮ ಮಾಡುವೆವು: ಛತ್ತೀಸ್‌ಗಢ ಸಿಎಂಒಂದು ದೊಡ್ಡ ಕಾರ್ಯಾಚರಣೆಯಲ್ಲಿ ಯಶಸ್ಸು ಸಾಧಿಸಿದ್ದೇವೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲ ಪೊಲೀಸ್ ಸಿಬ್ಬಂದಿಗೆ ಶುಭಾಶಯಗಳು.. ಭದ್ರತಾ ಸಿಬ್ಬಂದಿ ಸಾಧಿಸಿದ ಈ ಮಹಾನ್ ಯಶಸ್ಸು ಶ್ಲಾಘನೀಯವಾದ್ದು, ಅವರ ಧೈರ್ಯ, ಅದಮ್ಯ ಶೌರ್ಯಕ್ಕೆ ನಾನು ವಂದಿಸುತ್ತೇನೆ. ರಾಜ್ಯದಲ್ಲಿ ನಕ್ಸಲಿಸಂ ತನ್ನ ಕೊನೆಯ ಉಸಿರನ್ನಷ್ಟೇ ಉಳಿಸಿಕೊಂಡಿದೆ. ರಾಜ್ಯದಲ್ಲಿ ನಕ್ಸಲಿಸಂ ಸಂಪೂರ್ಣ ನಿರ್ನಾಮ ಮಾಡುತ್ತೇವೆ. ನಮ್ಮ ಡಬಲ್ ಎಂಜಿನ್ ಸರ್ಕಾರದ ಗುರಿಯಾಗಿದೆ. ನಕ್ಸಲಿಸಂ ನಾಶ ಮಾಡುವ ಉದ್ದೇಶದಿಂದ ಕಳೆದ 9 ತಿಂಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಎರಡು ಬಾರಿ ಭೇಟಿ ನೀಡಿ ಮಾರ್ಚ್ 2026ರೊಳಗೆ ನಕ್ಸಲಿಸಂನ್ನು ಕೊನೆಗಾಣಿಸುವ ಗುರಿ ಸಾಧಿಸುವ ಮಾತುಗಳನ್ನು ಹೇಳಿದ್ದು, ಅದಕ್ಕೆ ಪೂರಕವಾದ ಕೆಲಸದಲ್ಲಿ ನಿರತರಾಗಿದ್ದೇವೆ ಎಂದು ಛತ್ತೀಸ್‌ಗಢ ಸಿಎಂ ವಿಷ್ಣು ದೇವ್ ಸಾಯಿ ಹೇಳಿದ್ದಾರೆ.