Advertisement

1 ಲಕ್ಷ ರೂ. ಇನಾಮು ಹೊಂದಿದ್ದ ನಕ್ಸಲ್‌ ಕಮಾಂಡರ್‌ ಪೊಲೀಸರಿಗೆ ಶರಣು

10:23 AM Jun 05, 2019 | Team Udayavani |

ದಾಂತೇವಾಡ : ತನ್ನ ತಲೆಗೆ 1 ಲಕ್ಷ ರೂ. ಇನಾಮು ಹೊಂದಿದ್ದ ನಕ್ಸಲ್‌ ಕಮಾಂಡರ್‌ ಛತ್ತೀಸ್‌ಗಢದ ದಾಂತೇವಾಡದಲ್ಲಿ ಶರಣಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಸಿಪಿಎಂ ನ ನಿಷೇಧಿತ ಜನ್‌ ಮಿಲಿಶಿಯಾ ಕಮಾಂಡರ್‌ ಬಾಮನ್‌ ಬೇಕೋ (26) ತಾನೇ ಖುದ್ದಾಗಿ ದಾಂತೇವಾಡ ಎಸ್‌ಪಿ ಅಭಿಷೇಕ್‌ ಪಲ್ಲವ ಅವರ ಮುಂದೆ ಶರಣಾದನೆಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ನಕ್ಸಲ್‌ ಉಗ್ರ ಬೇಕೋ ನೆರೆಯ ನಾರಾಯಣಪುರ ಜಿಲ್ಲೆಯ ಓರ್ಛಾ ಎಂಬಲ್ಲಿನ ನಿವಾಸಿ. 2005ರಲ್ಲಿ ಈತ ನಿಷೇಧಿತ ಮಾವೋ ಸಂಘಟನೆಯ ಮಕ್ಕಳ ವಿಭಾಗಕ್ಕೆ ಸೇರಿದ್ದ. ನಕ್ಸಲ್‌ ಸಂಘಟನೆಗೆ ಯುವಕರನ್ನು ಸೇರಿಸಿಕೊಳ್ಳುವುದು ಮತ್ತು ಗ್ರಾಮಸ್ಥರಲ್ಲಿ ಮಾವೋ ಚಿಂತನೆಯನ್ನು ಪ್ರಚುರ ಪಡಿಸುವ ಕಾರ್ಯದಲ್ಲಿ ಆತ ತೊಡಗಿಕೊಂಡಿದ್ದ ಎಂದು ಎಸ್‌ಪಿ ಪಲ್ಲವ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next