ಛತ್ತೀಸ್ಗಢ: ಶನಿವಾರ ಛತ್ತೀಸ್ಗಢದಲ್ಲಿ ನಕ್ಸಲರ ವಿರುದ್ಧ ನಡೆದ ಗುಂಡಿನ ಚಕಮಕಿಯಲ್ಲಿ ವೀರಮರಣ ಹೊಂದಿರುವ ಸೈನಿಕರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
ಏಪ್ರಿಲ್ 3 ರಂದು ಛತ್ತೀಸಗಢದ ಸುಕ್ಮಾ-ಬಿಜಾಪುರ ಗಡಿಗಳ ಸಿಲಗುರ್ ಅರಣ್ಯ ವಲಯದಲ್ಲಿ ಸಿಆರ್ಪಿಫ್ ಯೋಧರು ಹಾಗೂ ಕೆಂಪು ಉಗ್ರರ ನಡುವೆ ನಡೆದ ಕಾದಾಟದಲ್ಲಿ ಇದುವರೆಗೆ 22 ಯೋಧರು ಹುತಾತ್ಮರಾಗಿರುವುದು ಇಂದು ವರದಿಗಳಿಂದ ತಿಳಿದು ಬಂದಿದೆ. ಖಚಿತವಾಗಿದೆ.
ಮೊದಲು ಐವರು ಯೋಧರು ಪ್ರಾಣ ಕಳೆದುಕೊಂಡಿದ್ದ ಬಗ್ಗೆ ವರದಿಯಾಗಿತ್ತು. ಇಂದು 17 ಯೋಧರ ಮೃತದೇಹಗಳು ಪತ್ತೆಯಾಗಿರುವುದರಿಂದ ಒಟ್ಟು 22 ಯೋಧರು ದಾಳಿಯಲ್ಲಿ ಹುತಾತ್ಮರಾದಂತಾಗಿದೆ.
ಇನ್ನು ಯೋಧರ ಎನ್ ಕೌಂಟರ್ ಗೆ 5 ಕ್ಕಿಂತ ಹೆಚ್ಚು ನಕ್ಸಲ್ ರು ಸಾವನ್ನಪಿದ್ದಾರೆ.