Advertisement

Naxal ಪೀಡಿತ ಗುಮ್ಲಾ ಜಿಲ್ಲೆಯಲ್ಲಿ ಕರ್ನಾಟಕದ ಬೆಳೆ ಬೆಳೆದ ಜಿಲ್ಲಾಧಿಕಾರಿ

11:25 PM Apr 21, 2023 | Team Udayavani |

ನವದೆಹಲಿ: ಜಾಗತಿಕ ಆಹಾರ ಪೂರೈಕೆಯಲ್ಲಿ ಸಿರಿಧಾನ್ಯಗಳ ಮಹತ್ತರ ಪಾತ್ರವನ್ನು ಬಲಪಡಿಸಲು ಮೋದಿ ನೇತೃತ್ವದ ಸರ್ಕಾರ ಸಂಕಲ್ಪ ಕೈಗೊಂಡಿದೆ. ಅದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಅತಿಹೆಚ್ಚು ಬಳಸಲಾಗುವ ರಾಗಿ ಬೆಳೆ, ಜಾರ್ಖಂಡ್‌ನ‌ ಗುಮ್ಲಾ ಎನ್ನುವ ಜಿಲ್ಲೆಯಲ್ಲಿ ಸದ್ದಿಲ್ಲದ ಕ್ರಾಂತಿಗೆ ಮುನ್ನುಡಿಬರೆದಿದೆ. ಈ ಕ್ಷೇತ್ರದಲ್ಲಿ ಸಾಧಿಸಿರುವ ಸಾಧನೆಯ ಬಗ್ಗೆ ಹಾರ್ವರ್ಡ್‌ ಬ್ಯುಸಿನೆಸ್‌ ಸ್ಕೂಲ್‌ ಕೂಡ ಪ್ರಸ್ತಾಪವಾಗಿದೆ.

Advertisement

ಗುಮ್ಲಾ ಜಿಲ್ಲೆಯ ಯುವ ಜಿಲ್ಲಾಧಿಕಾರಿ ಸುಶಾಂತ್‌ ಗೌರವ್‌. ಜಿಲ್ಲೆಯಲ್ಲಿ ಹೊಸ ಕೃಷಿ ಉದ್ಯಮಕ್ಕೆ ನಾಂದಿಹಾಡಿದ್ದಾರೆ.ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಭತ್ತದ ಜತೆಗೆ ಜಿಲ್ಲೆಯ ಜನರ ಅಪೌಷ್ಟಿಕತೆಯನ್ನು ದೂರಗೊಳಿ ಸುವ ನಿಟ್ಟಿನಲ್ಲಿ, ಮೊದಲಿಗೆ 1,600 ಎಕರೆಗಳಲ್ಲಿ ರಾಗಿ ಬೆಳೆಯಲು ಪ್ರೋತಾಹಿಸಿದರು. ಈಗ ಅದನ್ನು 3,600 ಎಕರೆಗೆ ವಿಸ್ತರಿಸಲಾಗಿದೆ.ಒಟ್ಟು ಫ‌ಸಲಿನ ಪ್ರಮಾಣವೂ ಶೇ.300ರಷ್ಟು ಹೆಚ್ಚಾಗಿದೆ.

ಸ್ವಸಹಾಯ ಗುಂಪು: ರಾಗಿ ಬೆಳೆಯನ್ನು ಜಿಲ್ಲೆಯಲ್ಲೇ ಉಪಯುಕ್ತ ಪಡಿಸುವ ನಿಟ್ಟಿನಲ್ಲಿ ಹಾಗೂ ಜಿಲ್ಲೆಯ ಮಹಿಳೆಯರ ಸಬಲೀಕರಣದ ದೃಷ್ಟಿಯಲ್ಲಿ ಸಖೀ ಮಂಡಲ್‌ ಸಮೂಹ ಎನ್ನುವ ಸ್ವ ಸಹಾಯ ಗುಂಪನ್ನು ಸೃಷ್ಟಿಸಿ, ಅವರ ನೇತೃತ್ವದ ಲ್ಲಿಯೇ ನಡೆಯುವಂಥ ರಾಗಿ ಸಂಸ್ಕರಣಾಗಾÃ ‌ವನ್ನು ಸ್ಥಾಪಿಸಲಾಗಿದೆ.

ಹಾರ್ವರ್ಡ್‌ನಲ್ಲಿ: ಗುಮ್ಲಾ ಜಿಲ್ಲೆಯ ಸಾಧನೆಯ ಬಗ್ಗೆ ಕೌಶಲ್ಯಾಭಿವೃದ್ಧಿ ಸಚಿವಾಲಯದಲ್ಲಿನ ಫೆಲೋ ಆಗಿರುವ ಅವಿನಾಶ್‌ ಕುಮಾರ್‌ ಅಧ್ಯ ಯನ ನಡೆಸಿ ಹಾರ್ವರ್ಡ್‌ ಬ್ಯುಸಿನೆಸ್‌ ಸ್ಕೂÇ ನಲ್ಲಿ ಸಮಗ್ರ ಅಧ್ಯಯನ ವರದಿ ಮಂಡಿಸಿದ್ದಾರೆ. ಸುಶಾಂತ್‌ ಪರವಾಗಿ ತೆರಳಿದ್ದರು. ಅದನ್ನು ಇತರ ಬ್ಯುಸಿನೆಸ್‌ ಸ್ಕೂಲ್‌ಗ‌ಳಲ್ಲಿ ಕೂಡ ಸಾಧನೆಯ ಬಗ್ಗೆ ಪ್ರಚಾರ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next