ಹೊಸದಿಲ್ಲಿ: ಇನ್ನು ಎರಡು ವರ್ಷಗಳಲ್ಲಿ ದೇಶದಲ್ಲಿ ನಕ್ಸಲ್ ಚಟುವಟಿಕೆಗಳಿಗೆ ಪೂರ್ಣ ವಿರಾಮ ಬೀಳಲಿದೆ. ಹೀಗೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನಕ್ಸಲ್ ಪೀಡಿತ ರಾಜ್ಯಗಳ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು, ನಕ್ಸಲ್ ಪಿಡುಗಿನಿಂದ ತತ್ತರಿಸಿರುವ ಮತ್ತು ಅದರಿಂದ ಸದ್ಯ ಬಿಡುಗಡೆ ಗೊಂಡ ಪ್ರದೇಶಗಳಲ್ಲಿ ನಿರಂತರವಾಗಿ ನಿಗಾ ಇರಿಸುವಿಕೆ ಯೂ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಕೇಂದ್ರ ಸರಕಾರದ ನೀತಿ ಏನಾಗಿತ್ತು?
2014ರಿಂದ ಈಚೆಗೆ ನಕ್ಸಲರ ವಿರುದ್ಧ ಶೂನ್ಯ ಸಹನೆ ನೀತಿ ಇದರಿಂದಾಗಿ 2022ರಲ್ಲಿ ಕನಿಷ್ಠ ಹಿಂಸಾ ಕೃತ್ಯಗಳು ಫಲಕೊಟ್ಟ ಭದ್ರತಾ ಕ್ರಮ, ಮಧ್ಯಸ್ಥಿಕೆ ನೀತಿ 2010 ರಿಂದ 2022ರ ವರೆಗೆ
ಶೇ.77 : ನಕ್ಸಲ್ ಕಾರ್ಯಾಚರಣೆ ಇಳಿಕೆ
ಶೇ.90 : ಭದ್ರತಾ ಸಿಬಂದಿ/ ನಾಗರಿಕ ಸಾವಿನ ಪ್ರಮಾಣ ಇಳಿಕೆ
2004 ರಿಂದ 2014ರ ವರೆಗೆ
17,679 : ನಕ್ಸಲ್ ದಾಳಿಗಳು
6,984 : ಕೃತ್ಯದಿಂದ ಮೃತಪಟ್ಟವರ ಸಂಖ್ಯೆ
2014 ರಿಂದ 2023ರ ವರೆಗೆ
7,649 : ನಕ್ಸಲ್ ದಾಳಿ
2,020 : ಮೃತರ ಸಂಖ್ಯೆ