Advertisement

ನಕ್ಸಲ್‌ ಚಟುವಟಿಕೆ: ಕ್ರಮಕ್ಕೆ ಆಗ್ರಹಿಸಿ ಮನವಿ

03:18 PM Jul 04, 2017 | Team Udayavani |

ರಾಯಚೂರು: ನಕ್ಸಲ್‌  ಚಟುವಟಿಕೆಯಲ್ಲಿ ತೊಡಗಿರುವ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ನಂದಿನಿ ಸುಂದರ್‌ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತೆ ಬೆಲಾ ಭಾಟಿಯಾ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿ ರಾಷ್ಟ್ರೀಯ ಹಿಂದೂ ಆಂದೋಲನಾ ಸಮಿತಿ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ
ಸಲ್ಲಿಸಿದರು.

Advertisement

ಈಗಾಗಲೇ ಪ್ರಾಧ್ಯಾಪಕ ಜಿ.ಎನ್‌. ಸಾಯಿಬಾಬಾ ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿರುವ ಆರೋಪ ಸಾಬೀತಾಗಿದ್ದು, ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಪೊಲೀಸರಿಗೆ ಶರಣಾಗಿರುವ ಮಾವೋವಾದಿ ಮುಖಂಡ ಪೋಡಿಯಮ್‌ ಪಾಂಡಾ
ಖುದ್ದು ಹೇಳಿಕೆಯಲ್ಲಿ ನಂದಿನಿ ಸುಂದರ್‌, ಬೆಲಾ ಭಾಟಿಯಾ ನಕ್ಸಲ್‌ ಕಾರ್ಯಾಚರಣೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಇದರ ಆಧಾರದ ಮೇಲೆ ಅವರನ್ನು ಬಂಧಿಸಿ ವಿಚಾರಣೆ ನಡೆಸುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದು
ಒತ್ತಾಯಿಸಿದರು.

ಮುಂಬಯಿನ ಡಾ| ಝಾಕೀರ್‌ ನಾಯಕ್‌ರ ಇಸ್ಲಾಮಿಕ್‌ ರಿಸರ್ಚ್‌ ಫೌಂಡೇಶನ್‌ ಭಯೋತ್ಪಾದನೆ ಕೃತ್ಯಗಳಿಗೆ 
ಪ್ರೋತ್ಸಾಹ ನೀಡುತ್ತಿರುವ ಆರೋಪ ಎದುರಿಸುತ್ತಿದ್ದರೂ, ಸಮಾಜವಾದಿ ಶಾಸಕ ಅಬು ಆಝಮೀ ಅವರು
ಶಾಲೆ ನಡೆಸಲು ಅನುಮತಿ ಕೇಳಿದ್ದರು. ಸರ್ಕಾರ ಕೂಡ ಅನುಮತಿ ನೀಡಿದೆ. ಕೂಡಲೇ ಅನುಮತಿ ರದ್ದುಪಡಿಸಿ ಶಾಲೆ
ಮುಚ್ಚಿಸಬೇಕು. ಸುಳ್ಳು ಆರೋಪದಲ್ಲಿ ಸಾ ದ್ವಿ ಪ್ರಜ್ಞಾಸಿಂಗ್‌ ಅವರನ್ನು 8 ವರ್ಷ ಜೈಲಿನಲ್ಲಿಟ್ಟು ಅತ್ಯಾಚಾರ ಎಸಗಿದವರ
ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಹಂಪಿ ವಿರೂಪಾಕ್ಷ ದೇವಸ್ಥಾನ ದೊಳಗೆ ವಿದೇಶಿಗರು ಚಪ್ಪಲಿ ಧರಿಸಿ ಕೊಂಡು, ಮದ್ಯದ ಬಾಟಲಿ ಹಿಡಿದು 
ಪ್ರವೇಶಿಸುವುದು ಖಂಡನೀಯ. ಇಂಥ ಅನಾಚಾರಗಳು ಅಲ್ಲಿ ನಡೆಯುತ್ತಿದ್ದು, ದೇಗುಲಗಳ ಪಾವಿತ್ರತೆ ಹಾಳಾಗುತ್ತಿದೆ.
ಹೀಗಾಗಿ ಇಂಥ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು. ಸಮಿತಿ ಸದಸ್ಯರಾದ ಕೃಷ್ಣವೇಣಿ, ಸುವರ್ಣಾ, ರಮೇಶ, ರಾಮಚಂದ್ರ ನಾಯಕ, ಸಂತೋಷ ರೆಡ್ಡಿ, ವೀರೇಶ, ಪ್ರಭು, ಮಂಜುನಾಥ, ಕರಿಯಪ್ಪ
ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next