Advertisement

ಪಾಕ್ ಮಾಜಿ ಪ್ರಧಾನಿ ನವಾಜ್ ಶರಿಫ್ ಬಂಧನ

09:55 AM Oct 12, 2019 | Team Udayavani |

ಇಸ್ಲಾಮಾಬಾದ್ : ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಚೌಧರಿ ಸಕ್ಕರೆ ಕಾರ್ಖನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಶುಕ್ರವಾರ ರಾಷ್ಟ್ರೀಯ ಉತ್ತರದಾಯಿತ್ವ ಬ್ಯೂರೋ ಅಧಿಕಾರಿಗಳು ನವಾಜ್ ಶರೀಫ್ ಅವರನ್ನು ವಶಕ್ಕೆ ಪಡೆದಿದ್ದಾರೆ.

Advertisement

ನವಾಜ್ ಶರೀಫ್ ಅವರನ್ನು ಉತ್ತರದಾಯಿತ್ವ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಧಿಕಾರಿಗಳು ಮಾಜಿ ಪ್ರಧಾನಿಯನ್ನು 15 ದಿನ ವಶಕ್ಕೆ ನೀಡುವಂತೆ ಕೊರ್ಟ್ ಗೆ ವಿನಂತಿಸಿದ್ದಾರೆ.

ಶರೀಫ್ ಬಂಧನವಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಕೋರ್ಟ್ ಮುಂಭಾಗದಲ್ಲಿ ಜಮೆಗೊಂಡಿದ್ದಾರು ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next