Advertisement
ಇದಕ್ಕೂ ಮೊದಲು, ರಾಜಸ್ಥಾನದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿಯವರ ಇತ್ತೀಚಿನ ಭಾಷಣವನ್ನು ಉಲ್ಲೇಖಿಸಿದ ಖರ್ಗೆ ಅವರು 370 ನೇ ವಿಧಿಯ ರದ್ದತಿಯನ್ನು ಪ್ರಸ್ತಾಪಿಸಿದರು. ಇದು ರಾಜಸ್ಥಾನದ ವಿಷಯವಲ್ಲ, ಆದರೆ ಜಮ್ಮು ಮತ್ತು ಕಾಶ್ಮೀರದ ಸಮಸ್ಯೆ ಎಂದು ಹೇಳಿದ್ದರು.
Related Articles
Advertisement
ಖರ್ಗೆಯವರು ತಮ್ಮ ಭಾಷಣದಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು 370 ನೇ ವಿಧಿಯ ಬಗ್ಗೆ ಹೇಳಿದ್ದನ್ನು ಉಲ್ಲೇಖಿಸಿದ ಪ್ರಧಾನಿ, ಬಿಹಾರ ಮತ್ತು ರಾಜಸ್ಥಾನದ ಯುವಕರು ಜಮ್ಮು ಮತ್ತು ಕಾಶ್ಮೀರವನ್ನು ರಕ್ಷಿಸಲು ಹೋಗಿ ತಮ್ಮ ಪರಮ ತ್ಯಾಗವನ್ನು ಅರ್ಪಿಸಿದರು ಎಂದು ಹೇಳಿದರು.
“ಇದನ್ನು ಕೇಳಲು ನನಗೆ ನಾಚಿಕೆಯಾಯಿತು. ಕಾಂಗ್ರೆಸ್ ನನ್ನ ಮಾತನ್ನು ಕೇಳಬೇಕು. ರಾಜಸ್ಥಾನ ಮತ್ತು ಬಿಹಾರದ ಯುವಕರು ಜಮ್ಮು ಮತ್ತು ಕಾಶ್ಮೀರವನ್ನು ರಕ್ಷಿಸುವ ಸಂದರ್ಭದಲ್ಲಿ ತಮ್ಮ ಪರಮ ತ್ಯಾಗವನ್ನು ನೀಡಿದರು. ಆದರೆ ನೀವು ‘ಕಾಶ್ಮೀರ ಸೇ ಕ್ಯಾ ಲೇನಾ ದೇನಾ’ ಎಂದು ಹೇಳುತ್ತಿದ್ದೀರಿ. ಇದು ತುಕ್ಡೆ-ತುಕ್ಡೆ ಗ್ಯಾಂಗ್‌ನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
“ಇಂತಹ ಭಾಷೆ ಬಳಸಿದ್ದಕ್ಕಾಗಿ ನಾವು ಈ ಜನರಲ್ಲಿ ಕ್ಷಮೆಯಾಚಿಸಬೇಕೇ? ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರಿಗೆ ನಾವು ಅಗೌರವ ತೋರಿಸಬೇಕೇ?” ಎಂದು ಪಿಎಂ ಮೋದಿ ಕಿಡಿಕಾರಿದರು.