Advertisement

26 Rafale aircraft ನೌಕಾಪಡೆಗೂ ಸಿಗಲಿದೆ: ಡೀಲ್‌ಗೆ ಫ್ರಾನ್ಸ್‌ನ ಟೆಂಡರ್‌ ಪೂರ್ಣ

01:14 AM Dec 22, 2023 | Team Udayavani |

ಹೊಸದಿಲ್ಲಿ: ಭಾರತೀಯ ನೌಕಾಪಡೆಗೆ ಅಗತ್ಯವಾಗಿರುವ 26 ರಫೇಲ್‌ ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ಬಗ್ಗೆ ಫ್ರಾನ್ಸ್‌ ಟೆಂಡರ್‌ ಪ್ರಕ್ರಿಯೆಯನ್ನು ಪೂರೈಸಿದೆ. ಅದರ ಒಟ್ಟು ಮೌಲ್ಯ 50 ಸಾವಿರ ಕೋಟಿ ರೂ. ಆಗಿದೆ. ಅಕ್ಟೋಬರ್‌ನಲ್ಲಿ ರಕ್ಷಣ ಸಚಿವಾಲಯ ಈ ವಿಮಾನಗಳ ಪೂರೈಕೆ ಸಂಬಂಧ ಫ್ರಾನ್ಸ್‌ನ ಡಸೋ ರಫೇಲ್‌ ಕಂಪೆನಿಗೆ ಆ ದೇಶದ ಸರ ಕಾ ರದ ಮೂಲಕ ಕೋರಿಕೆ ಸಲ್ಲಿಸಿತ್ತು. ಕೆಲವು ದಿನಗಳ ಹಿಂದೆ ಫ್ರಾನ್ಸ್‌, ಅದಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಕ್ರಿಯೆಗಳನ್ನು ರಕ್ಷಣ ಸಚಿವಾಲಯಕ್ಕೆ ಸಲ್ಲಿಕೆ ಮಾಡಿದೆ.

Advertisement

ಭಾರತೀಯ ನೌಕಾಪಡೆಗಾಗಿ ಫ್ರಾನ್ಸ್‌ನಿಂದ 30 ಸಾವಿರ ಕೋಟಿ ರೂ. ಮೌಲ್ಯದ ಸ್ಕಾಪೇìನ್‌ ಸಬ್‌ಮರೀನ್‌ಗಳನ್ನು ಖರೀದಿ ಮಾಡುವುದರ ಬಗ್ಗೆ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದ ರಕ್ಷಣ ಖರೀದಿ ಸಮಿತಿ (ಡಿಎಸಿ) ಜೂ. 13ರಂದು ಸಮ್ಮತಿ ನೀಡಿತ್ತು. ಆ ವಹಿವಾಟಿಗಿಂತ ಹೊರತಾಗಿ 50 ಸಾವಿರ ಕೋಟಿ ರೂ. ಮೌಲ್ಯದ ನೌಕಾಪಡೆ ಆವೃತ್ತಿಯ ರಫೇಲ್‌ ಯುದ್ಧ ವಿಮಾನ ಖರೀದಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next