Advertisement

ಮಿಗ್‌-29ಕೆ ವಿಮಾನ ಪತನ; ಪೈಲಟ್‌ ಪಾರು

10:17 AM Feb 24, 2020 | sudhir |

ಪಣಜಿ: ಗೋವಾದ ನೌಕಾನೆಲೆ ಐಎನ್‌ಎ ಹಂಸಾದಿಂದ ಕಾರವಾರ ವಾಯು ಮಾರ್ಗವಾಗಿ ಭಾನುವಾರ ಬೆಳಗ್ಗೆ ಎಂದಿನಂತೆ ಹಾರಾಟ ನಡೆಸಿದ್ದ ಮಿಗ್‌-29ಕೆ ವಿಮಾನ ಪತನವಾಗಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Advertisement

ಗೋವಾ ಕರಾವಳಿಯಲ್ಲಿ ಮಿಗ್‌ 29ಕೆ ವಿಮಾನ ಭಾನುವಾರ ತರಬೇತಿ ಹಾರಾಟ ನಡೆಸಿತ್ತು. ಈ ಸಂದರ್ಭದಲ್ಲಿ ಬೆಳಗ್ಗೆ 10:30ಕ್ಕೆ ಅಪಘಾತಕ್ಕೀಡಾಗಿದೆ. ವಿಮಾನದ ಫೈಲಟ್‌ ಸುರಕ್ಷಿತವಾಗಿ ಪ್ಯಾರಾಚೂಟ್‌ ಸಹಾಯದಿಂದ ಹಾರಿದ್ದು, ಅವರನ್ನು ರಕ್ಷಿಸಿದ ಸ್ಥಳೀಯರು ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಗೋವಾ ನೌಕಾನೆಲೆಗೆ ಕಳುಹಿಸಲಾಗಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ನೌಕಾಪಡೆ, ಅಪಘಾತ ಹೇಗೆ ಸಂಭವಿಸಿತು ಎಂಬ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ತಿಳಿಸಿದೆ. ಮಿಗ್‌ 29ಕೆ ವಿಮಾನದ ಬಲಭಾಗಕ್ಕೆ ಪಕ್ಷಿ ಅಪ್ಪಳಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅದೃಷ್ಟವಷಾತ್‌ ನಿರ್ಜನ ಪ್ರದೇಶದಲ್ಲಿ ವಿಮಾನ ಪತನವಾಗಿದ್ದರಿಂದ ಯಾವುದೇ ಅನಾಹುತವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next