ಕಾರವಾರ: ಅತೀವ ಮಳೆಯ ಪರಿಣಾಮ ನೆರೆಯಿಂದಾಗಿ ಮುಂಡಗೋಡದ ವೈದ್ಯರೊಬ್ಬರು ಸೇರಿದಂತೆ 11 ಮಂದಿ ಹೋಟೇಲಿನ ಮಹಡಿ ಹತ್ತಿ ಕುಳಿತುಕೊಂಡಿದ್ದರು.
ಎನ್.ಡಿ.ಆರ್.ಎಫ್ ತಂಡದೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಐಎನ್‌ಎಸ್ ಕದಂಬ ನೌಕಾನೆಲೆಯ ಹೆಲಿಕಾಪ್ಟರ್ ಸಿಬ್ಬಂದಿ ಸುಂಕಸಾಳದ ಹೈಲ್ಯಾಂಡ್ ಹಾಗೂ ನವಮಿ ಹೋಟೆಲ್ ನಲ್ಲಿ ಸಿಲುಕಿಕೊಂಡಿದ್ದವರನ್ನು ಏರ್ ಲಿಫ್ಟ್ ಮಾಡಿ ರಕ್ಷಿಸಿದ್ದಾರೆ .
ಇನ್ನೊಂದೆಡೆ ಉಕ್ಕಿ ಹರಿಯುತ್ತಿರುವ ಗಂಗಾವಳಿ ನದಿ ಪ್ರವಾಹಕ್ಕೆ ಗುಳ್ಳಾಪುರದ ಸೇತುವೆಯೇ ಕೊಚ್ಚಿ ಹೋಗಿದೆ. ಇದರಿಂದ ಗುಳ್ಳಾಪುರ- ಹಳವಳ್ಳಿ ಸಂಪರ್ಕ ಕಡಿತವಾಗಿದೆ.
ಈ ಭಾಗದಲ್ಲಿ 2800 ಕುಟುಂಬಗಳಿವೆ ಕೊಡಸಳ್ಳಿ ನಿರಾಶ್ರಿತರು ಹೆಗ್ಗಾರ, ಕಲ್ಲೇಶ್ವರದಲ್ಲಿ ನೆಲೆ ನಿಂತಿದ್ದರು. ಶೇವ್ಕಾರ್, ಕೈಗಡಿ, ದೊರಣಗಾರ್, ಕೋನಾಳ, ಕನಕನಹಳ್ಳಿ, ಮಳಲಗಾಂವ, ಹಳವಳ್ಳಿ, ಕಮ್ಮಾಣಿ ಗ್ರಾಮಗಳಿಗೆ ಈ ಸೇತುವೆ ಸಂಪರ್ಕ ಕೊಂಡಿಯಾಗಿತ್ತು.
ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯಕ್ಕೆ ಸ್ವಾಮಿ ದರ್ಶನ ಪಡೆದ ತಮಿಳು ನಿರ್ದೇಶಕ ಅಟ್ಲೀ
ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು, ನಾಗರಿಕರು, ಕೃಷಿಕರು ಯಲ್ಲಾಪುರದಿಂದ ಅಂಕೋಲಾಕ್ಕೆ ತೆರಳಲು ಸೇತುವೆಯನ್ನು ಬಳಸುತ್ತಿದ್ದರು