Advertisement
ನೌಕಾದಿನದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, “ಪಾಕ್ ನೌಕಾಪಡೆಯು ಇದ್ದಕ್ಕಿದ್ದಂತೆ ಬಲವರ್ಧಿಸಿಕೊಳ್ಳುತ್ತಿರುವುದು ಗೊತ್ತು. 50 ನೌಕೆಗಳ ಪಡೆಯಾಗಲು ಪಾಕ್ ಉದ್ದೇಶಿಸಿದೆ. ಆದರೆ ಅವರ ಆರ್ಥಿಕ ಸ್ಥಿತಿ ನೋಡಿದರೆ ಇದು ಹೇಗೆ ಸಾಧ್ಯ ಎಂಬ ಅಚ್ಚರಿಯೂ ಆಗುತ್ತಿದೆ. ಚೀನ ಬೆಂಬಲ ದೊಂದಿಗೆ ಪಾಕ್ ಯುದ್ಧ ನೌಕೆ ನಿರ್ಮಿಸುತ್ತಿರುವುದು, ಯಾರು ಏನು ಮಾಡುತ್ತಿದ್ದಾರೆ ಎಂಬುದೂ ನಮಗೆ ಗೊತ್ತಿದೆ ಎಂದು ಪರೋಕ್ಷವಾಗಿಯೇ ಎಚ್ಚರಿಕೆ ನೀಡಿದ್ದಾರೆ.
ನಮ್ಮ ನೌಕಾಪಡೆಗೆ 26 ರಫೇಲ್ಗಳ ಖರೀದಿಗೆ ಶೀಘ್ರ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆ ಇದೆ. ಅಣ್ವಸ್ತ್ರ ಸಜ್ಜಿತವಾದ 2 ದೇಶೀಯ ಜಲಾಂತರ್ಗಾಮಿಗಳ ನಿರ್ಮಾಣಕ್ಕೂ ಭದ್ರತೆ ಸಂಬಂಧಿಸಿದ ಸಂಪುಟ ಸಮಿತಿ ಒಪ್ಪಿಗೆ ನೀಡಿದೆ ಎಂದಿದ್ದಾರೆ.