Advertisement

ನಾವುಂದ ನಿಗದಿತ ಸ್ಥಳದಲ್ಲೇ ಅಂಡರ್‌ ಪಾಸ್‌ ನಿರ್ಮಿಸಿ: ಪ್ರತಿಭಟನೆ

04:42 PM Apr 13, 2017 | Team Udayavani |

ಮರವಂತೆ: ನಾವುಂದದಲ್ಲಿ ಈ ಹಿಂದೆ ನಿಗದಿಪಡಿಸಿದ  ಪ್ರದೇಶದಲ್ಲಿ ಅಂಡರ್‌ ಪಾಸ್‌ ನಿರ್ಮಾಣ ಹಾಗೂ ನಿವೇಶನ ಸಹಿತ ಬಡ ಕುಟುಂಬಗಳಿಗೆ ಹಕ್ಕು ಪತ್ರಕ್ಕಾಗಿ ನಾವುಂದ ಗ್ರಾಮ ಪಂ. ಎದುರು ಬುಧವಾರ ಸಾರ್ವಜನಿಕರಿಂದ ಪ್ರತಿಭಟನೆ ನಡೆಯಿತು.

Advertisement

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ  ತಾ.ಪಂ.ಸದಸ್ಯ ಹಕ್ಕಾಡಿ ಜಗದೀಶ ಪೂಜಾರಿ, ಸಾರ್ವಜನಿಕರ ಹಿತದೃಷ್ಟಿಯಿಂದ ಈ ಮೊದಲು ನಿರ್ಧರಿಸಿರುವ ಸ್ಥಳದಲ್ಲೇ ಅಂಡರ್‌ ಪಾಸ್‌ ನಿರ್ಮಾಣವಾಗಬೇಕು ಇದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಉಪಯುಕ್ತವಾಗಿರುತ್ತದೆ.  ನಿವೇಶನ ರಹಿತ ಬಡ ಕುಟುಂಬಗಳು 5 ವರ್ಷಗಳಿಂದ ಅರ್ಜಿ ಸಲ್ಲಿಸುತ್ತಿದ್ದು ಒಂದು ಸಾವಿರ ಫಲಾನುಭವಿಗಳಿದ್ದು  ಇವರಿಗೆ ಗ್ರಾ. ಪಂ. ವ್ಯಾಪ್ತಿಯಲ್ಲಿರುವ 58 ಎಕರೆ ಸರಕಾರಿ ಭೂಮಿಯಲ್ಲಿ 30 ಎಕರೆ ಜಾಗವನ್ನು ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಧಿಕಾರಿಗಳು ಜಂಟಿಯಾಗಿ ಸರಕಾರಿ ಜಾಗವನ್ನು ಸರ್ವೇ ಮಾಡುವುದರ ಮೂಲಕ ಹಕ್ಕು ಪತ್ರ ದೊರಕಿಸಿಕೊಡಲು ಶೀಘ್ರ ಮುಂದಾಗಬೇಕು ಎಂದು  ಕರ್ನಾಟಕ ಪ್ರಾಂತ ಕೃಷಿ ಕೂಲಿ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಕೋಣಿ ಆಗ್ರಹಿಸಿದರು.

ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಗ್ರಾಮ ಪಂ. ತನಕ ಮೆರವಣಿಗೆಯಲ್ಲಿ  ಬಂದು ಮನವಿಯನ್ನು  ಬೈಂದೂರು ತಹಶೀಲ್ದಾರ ಕಿರಣ ಜಿ.ಗೋರಯ್ಯ ಹಾಗೂ ನಾವುಂದ ಗ್ರಾಮ ಪಂ.ಅಧ್ಯಕ್ಷ ನರಸಿಂಹ ದೇವಾಡಿಗ ಅವರಿಗೆ ನೀಡಿದರು.ಈ ಸಂದರ್ಭದಲ್ಲಿ ಮಹೇಂದ್ರ ಪೂಜಾರಿ, ರಾಮ ಖಾರ್ವಿ, ನರಸಿಂಹ ಆಚಾರಿ, ರಾಜೇಶ ಪೂಜಾರಿ, ಅಶೋಕ ಆಚಾರಿ, ನಿವೇಶನ ರಹಿತ ಸಮಿತಿ ಅಧ್ಯಕ್ಷೆ ಸಿಂಗಾರಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next