Advertisement
ಮಂಗಳೂರು/ಉಡುಪಿ: ಹಿಂದೆಲ್ಲ ಹಬ್ಬದ ಸಂಭ್ರಮವೆಂದರೆ ಹೊಸ ಬಟ್ಟೆ ಖರೀದಿಯೇ. ಹಬ್ಬದ ಆಚರಣೆಯ ಕಳೆ ತೋರುತ್ತಿದ್ದುದೇ ನಾವು ತೊಡುತ್ತಿದ್ದ ಹೊಸ ಬಟ್ಟೆಯಿಂದ.ಕೆಲವು ವರ್ಷಗಳಿಂದ ಇದರ ರೀತಿ ಸ್ವಲ್ಪ ಬದಲಾಗಿದೆ.
Related Articles
ಮಂಗಳೂರಿನ ಸಂಜೀವ ಶೆಟ್ಟಿ ಟೆಕ್ಸ್‌ಟೈಲ್ಸ್‌ನ ಮಾಲಕರಾದ ಮಹೇಂದ್ರ ಅವರು ಹೇಳುವ ಪ್ರಕಾರ, ಕೆಲವು ತಿಂಗಳುಗಳಿಂದ ವಸ್ತ್ರ ಮಾರುಕಟ್ಟೆ ಕೂಡ ಕೊಂಚ ಕುಸಿತ ಕಂಡಿತ್ತು. ಶುಭ ಕಾರ್ಯಕ್ರಮಗಳು ಕಡಿಮೆ ಆಗಿದ್ದವು. ಆದರೆ ಈಗ ನವರಾತ್ರಿ ಬಂದಿರುವುದು ಮತ್ತು ಶುಭ ಕಾರ್ಯಕ್ರಮಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ವಹಿವಾಟನ್ನು ನಿರೀಕ್ಷಿಸಲಾಗುತ್ತಿದೆ.
Advertisement
ಈ ಅಭಿಪ್ರಾಯವನ್ನು ಅನುಮೋದಿಸುವ ಉಡುಪಿಯ ಗೀತಾಂಜಲಿ ಸಿಲ್ಕ್$Õನ ಆಡಳಿತ ಪಾಲುದಾರ ಆರ್.ಕೆ. ನಾಯಕ್, ಈ ಹಬ್ಬಗಳಿಗೆಂದೇ ಹೊಸ ವಿನ್ಯಾಸಗಳನ್ನು ತರಿಸುತ್ತೇವೆ. ಎಂಬ್ರಾಯxರಿ ಸ್ಟೋನ್ ವರ್ಕ್ ಮತ್ತು ಜರಿಯಂತಹ ಡಿಸೈನ್‌ಗಳು ಈಗ ಕಡಿಮೆಯಾಗಿವೆ. ಮಹಿಳೆಯರು ಹೆಚ್ಚಾಗಿ ಎಂಬೋಸ್ಡ್ ಡ್ರೆಸ್ ಡಿಸೈನ್‌ಗಳನ್ನು ಇಷ್ಟಪಡುತ್ತಾರೆ. ಸ್ಲಿಮ್ ಫಿಟ್ಟಿಂಗ್ ಉಡುಗೆಗಳು ಮಹಿಳೆಯರು ಮತ್ತು ಪುರುಷರಿಗೆ ಅಚ್ಚುಮೆಚ್ಚು. ಈ ಟ್ರೆಂಡ್ ಅನುಸರಿಸಿ ಹೊಸ ವಿನ್ಯಾಸದವುಗಳನ್ನು ತರಿಸಿಕೊಂಡಿದ್ದೇವೆ. ಕೆಲವು ಯುವಜನರು ಆನ್‌ಲೈನ್ ಕಡೆಗೆ ಆಕರ್ಷಿತರಾಗುತ್ತಿದ್ದರೂ ಮಳಿಗೆಗೆ ಬಂದು ಹೊಸ ಡಿಸೈನ್‌ಗಳನ್ನು ನೋಡಿ ಆಸ್ವಾದಿಸಿ ಖರೀದಿಸುವ ಕ್ರೇಝ್ ಕಡಿಮೆಯಾಗಿಲ್ಲ ಎನ್ನುತ್ತಾರೆ.
“ಆನ್‌ಲೈನ್ ಮಾರ್ಕೆಟಿಂಗ್ ಇಂದು ದೊಡ್ಡ ಮಟ್ಟದಲ್ಲಿ ವ್ಯಾಪಿಸಿರುವುದರಿಂದ ಮಳಿಗೆಗಳಿಗೆ ಜನರು ಬರುವ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಆದರೆ ಹಬ್ಬದ ಸೀಸನ್ ಶುರುವಾಗಿದ್ದರಿಂದ ಜನರು ಬರತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ವ್ಯಾಪಾರವನ್ನು ನಿರೀಕ್ಷಿಸುತ್ತಿದ್ದೇವೆ’ ಎನ್ನುತ್ತಾರೆ ನಗರದ ಕುಲ್ಯಾಡಿಕಾರ್ನ ಮಾಲಕರಾದ ಸುಧೀರ್ ಪೈ.
ನವನವೀನ ಆಯ್ಕೆಗೆ ಆದ್ಯತೆಹಬ್ಬ-ಹರಿದಿನಗಳಲ್ಲಿ ಗ್ರಾಹಕರ ಸಂಖ್ಯೆ ದುಪ್ಪಟ್ಟಾಗುತ್ತದೆ. ಎಲ್ಲ ವಯೋಮಾನದವರಿಗೂ ಅನುಕೂಲವಾಗುವಂತೆ ದಿನಂಪ್ರತಿ ನವನವೀನ ವಿನ್ಯಾಸಗಳ ವಸ್ತ್ರಗಳನ್ನು ತರಿಸಲಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವ್ಯಾಪಾರ ಉತ್ತಮವಾಗಿದೆ. ಈಗ ಸೀಸನ್ ಆರಂಭವಾಗಿದೆ. ಮತ್ತಷ್ಟು ಗ್ರಾಹಕರ ನಿರೀಕ್ಷೆ ಹೊಂದಲಾಗಿದೆ. ಪ್ರತಿ ಸೀಸನ್‌ನಲ್ಲೂ ಸಾವಿರಾರು ಮಂದಿ ವಸ್ತ್ರ ಪ್ರಿಯರನ್ನು ನಮ್ಮ ಸದಸ್ಯರನ್ನಾಗಿ ಮಾಡಿಕೊಳ್ಳುವುದೇ ನಮ್ಮ ಉದ್ದೇಶ. ನವರಾತ್ರಿ ಆರಂಭ ರವಿವಾರವಾದ್ದರಿಂದ ವ್ಯಾಪಾರ ಚೆನ್ನಾಗಿಯೇ ಇದೆ. ಗ್ರಾಹಕರ ಈ ಜೋಶ್ ಹೀಗೆಯೇ ಮುಂದುವರಿಯುವ ವಿಶ್ವಾಸವಿದೆ ಎನ್ನುತ್ತಾರೆ ಉದ್ಯಾವರದ ಜಯಲಕ್ಷ್ಮೀ ಸಿಲ್ಕ್$Õನ ಮಾಲಕ ವೀರೇಂದ್ರ ಹೆಗ್ಡೆ. ಪಾವನಿ ಟೆಕ್ಸ್‌ಟೈಲ್ಸ್‌ನ ಪಾಲುದಾರರಾದ ಗೌತಮ್ ಅವರ ಪ್ರಕಾರ, ಮಾರುಕಟ್ಟೆ ಕುಸಿತದ ಮಧ್ಯೆಯೇ ಹಬ್ಬದ ಸಡಗರದಿಂದಾಗಿ ವ್ಯಾಪಾರದ ನಿರೀಕ್ಷೆ ಹೆಚ್ಚಿದೆ. ಹೊಸ ಬಟ್ಟೆಗಳ ಸಂಗ್ರಹ ಈಗಾಗಲೇ ಮಾರುಕಟ್ಟೆಗೆ ಬಂದಿದ್ದು, ಗ್ರಾಹಕರು ಸ್ಪಂದಿಸುವ ವಿಶ್ವಾಸವಿದೆ. ಹೊಸ ಡಿಸೈನ್‌ಗಳತ್ತ ಚಿತ್ತ
ಹೆಚ್ಚೆಚ್ಚು ಗ್ರಾಹಕರನ್ನು ಆಕರ್ಷಿಸಲು ನಾವು ಸದಾ ಪ್ರಯತ್ನಿಸುತ್ತೇವೆ ಎಂದು ಹೇಳುವ ಉಡುಪಿಯ ವೇದಾಸ್ ವಸ್ತ್ರ ಮಳಿಗೆಯ ಮಾಲಕರಾದ ದೇವಾನಂದ ಶೆಣೈ, ಹಬ್ಬ- ಮದುವೆ ಸೀಸನ್ ಪ್ರಯುಕ್ತ ವಿಶೇಷ ಆಫರ್‌ಗಳನ್ನು ನೀಡ ಲಾಗುತ್ತಿದೆ. ಹ್ಯಾಂಡ್‌ಲೂಮ್ಸ್ ಪ್ರಾಡಕ್ಟ್ಗಳಿಗೆ ಮಹಿಳೆಯರು ಹೆಚ್ಚು ಆಕರ್ಷಿತರಾಗಿದ್ದಾರೆ. ಹೊಸ ವಿನ್ಯಾಸಗಳ ಉಡುಗೆಗಳಿಗೆ ಬೇಡಿಕೆ ಹೆಚ್ಚು. ಸೀಸನ್ ಈಗ ಆರಂಭವಾಗಿದ್ದು, ವ್ಯಾಪಾರ ಚೇತರಿಕೆ ಕಾಣತೊಡಗಿದೆ. ಆನ್‌ಲೈನ್‌ನಲ್ಲಿ ಶೇ. 2ರಷ್ಟು ಮಂದಿ ಮಾತ್ರ ಖರೀದಿಸುತ್ತಾರೆ. ಉಳಿದವರು ಮಳಿಗೆಗಳಿಗೆ ಬಂದು ಡಿಸೈನ್ ಮತ್ತು ಗುಣಮಟ್ಟವನ್ನು ಖುದ್ದು ಪರಿಶೀಲಿಸಿ ಖರೀದಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.