Advertisement
ಸುರತ್ಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಈ ಬಾರಿ ಸರ್ವ ಧರ್ಮೀಯರ ಹಬ್ಬ ಹರಿದಿನಗಳನ್ನು ಒಗ್ಗಟ್ಟಾಗಿ ಆಚರಿಸುವ ಮೂಲಕ ಸೌಹಾರ್ದ ಮೆರೆದಿದೆ. ಅಧ್ಯಕ್ಷೆ ಶಕುಂತಳಾ ಕಾಮತ್ ನೇತೃತ್ವದಲ್ಲಿ ಈ ಬಾರಿ ವರಮಹಾಲಕ್ಷ್ಮೀ ಪೂಜೆಯಿಂದ ಹಿಡಿದು ವಿವಿಧ ಹಬ್ಬಗಳನ್ನು ಸಂತಸದಿಂದ ಸರ್ವರೂ ಆಚರಿಸಿ ಗಮನ ಸೆಳೆದಿದ್ದಾರೆ. ಸುರತ್ಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಹಾಗೂ ವಾರ್ಡ್ ಸಂಖ್ಯೆ 6ರ ಅಧ್ಯಕ್ಷೆ ಜಮೀಲಾ ಬಾನು ಕಾನಾದ ಗುರು ಸೇವಾ ಭಜನ ಮಂದಿರದಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಆಯೋಜಿಸಿದ್ದರು. ಹಿಂದೂಗಳು ಭಜನೆ, ಶ್ರೀದೇವಿಯ ಸ್ತೋತ್ರ ಪಠಣದಲ್ಲಿ ಪಾಲ್ಗೊಂಡರು. ಇನ್ನು ಕ್ರಿಶಿಯನ್ ಸಮುದಾಯದ ಸುನಿತಾ ಡಿ’ಸೋಜ ಪೂಜಾ ಕೈಂಕರ್ಯಗಳಲ್ಲಿ ಸಹಾಯ ಹಸ್ತ ಚಾಚಿಸಿದರು. ಸಂಜೆ ನಡೆದ ಪೂಜೆ ಬಳಿಕ ಮುತ್ತೈದೆಯರಿಗೆ ಬಾಗಿನ ಅರ್ಪಿಸಿ ಆಶೀರ್ವಾದ ಪಡೆಯಲಾಯಿತು.
ಶಕುಂತಳಾ ಕಾಮತ್ ಅವರು, ನವರಾತ್ರಿ ದುರ್ಗೆಯ ಶಕ್ತಿಯನ್ನು ಆರಾಧಿ ಸಲಾಗುತ್ತದೆ. ನವದಿನಗಳಲ್ಲಿ ದುರ್ಗೆಯನ್ನು ವಿವಿಧ ಅವತಾರಗಳಲ್ಲಿ ಪೂಜಿಸುವುದು ವಾಡಿಕೆ. ಈ ಬಾರಿ ನಾವು ಸೌಹಾರ್ದಯುತವಾಗಿ ಎಲ್ಲ ಕಡೆ ಪೂಜೆ ನೆರವೇರಿಸಿದ್ದೇವೆ. ಕಾನಾ ಗುರು ಸೇವಾ ಮಂದಿರಲ್ಲಿ ಜಮೀಲಾ ಬಾನು ಆಯೋಜಿಸಿದ್ದಾರೆ. ಸುರತ್ಕಲ್‌ನಲ್ಲಿ ಸುನೀತಾ ಡಿ’ಸೋಜಾ ಆಯೋಜನೆ ಮಾಡಿದ್ದರು ಎಂದರು.