Advertisement

ಟಗರಿನ ಕಾಳಗ ನಡೆಸಲು ತೊಂದರೆ ಸಲ್ಲ 

08:18 PM Oct 14, 2021 | Team Udayavani |

ಹುಬ್ಬಳ್ಳಿ: ಘಂಟಿಕೇರಿ ನ್ಯಾಷನಲ್‌ ಸ್ಕೂಲ್‌ ಹಿಂಭಾಗದ ಬಯಲು ಜಾಗೆಯಲ್ಲಿ ನವರಾತ್ರಿ ಉತ್ಸವ ನಿಮಿತ್ತ ಬುಧವಾರ ಟಗರಿನ ಕಾಳಗ ನಡೆಸಿತು.

Advertisement

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅಶೋಕ ಕಾಟವೆ ಮಾತನಾಡಿ, ಈ ಭಾಗದಲ್ಲಿ ಹಲವಾರು ವರ್ಷಗಳಿಂದ ಟಗರಿನ ಕಾಳಗ ನಡೆಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗುತ್ತಿರುವ ಟಗರಿನ ಕಾಳಗವನ್ನು ಮತ್ತೆ ಮೆರಗು ತರುವಂತೆ ನಡೆಸಬೇಕು. ಜಲ್ಲಿಕಟ್ಟು ಸ್ಪರ್ಧೆಯನ್ನು ನಿಷೇಧಿಸಬೇಕೆಂದು ಹಲವು ಯತ್ನಗಳು ನಡೆದರೂ ಹೋರಾಟ ನಡೆಸಿ ಮತ್ತೆ ಜಲ್ಲಿಕಟ್ಟು ಸ್ಪರ್ಧೆ ನಡೆಯುವಂತೆ ಮಾಡಿದರು. ಅದೇ ರೀತಿ ಈ ಭಾಗದಲ್ಲಿ ಟಗರಿನ ಕಾಳಗ ನಡೆಸಲು ಯಾವುದೇ ತೊಂದರೆ ನೀಡಬಾರದು ಎಂದರು.

ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅನಿಲಕುಮಾರ ಪಾಟೀಲ, ಹುಡಾ ಅಧ್ಯಕ್ಷ ನಾಗೇಶ ಕಲುಬುರ್ಗಿ ಮಾತನಾಡಿದರು. ಚಂದ್ರಶೇಖರ ಗೋಕಾಕ, ಶಿವಾನಂದ ಮುತ್ತಣ್ಣವರ, ಪ್ರಭು ನವಲಗುಂದಮಠ, ಶ್ಯಾಮ ಜಾಧವ, ಶಶಿ ಬಿಜವಾಡ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next