Advertisement

ದೇಗುಲಗಳಲ್ಲಿ ನವರಾತ್ರಿ ಪೂಜೆ

11:05 PM Sep 29, 2019 | Sriram |

ಬೆಳ್ತಂಗಡಿ: ನವರಾತ್ರಿ ಉತ್ಸವದ ಪ್ರಯುಕ್ತ ತಾ|ನ ದೇವಿ ದೇವಸ್ಥಾನ ಹಾಗೂ ಪ್ರಮುಖ ದೇವಸ್ಥಾನಗಳಲ್ಲಿ ರವಿವಾರ ವಿಶೇಷ ಪೂಜೆಗಳು ಜರಗಿದವು.

Advertisement

ಸವಣಾಲು ಶ್ರೀ ದುರ್ಗಾಕಾಳಿಕಾಂಬಾ ಕ್ಷೇತ್ರದಲ್ಲಿ ಬೆಳಗ್ಗೆ ಪ್ರಾರ್ಥನೆ, ಗಣಪತಿ ಹೋಮ, ಚಂಡಿಕಾಹೋಮ ಪೂರ್ಣಾ ಹುತಿ, ಮಧ್ಯಾಹ್ನದ ಪೂಜೆ, ಅನ್ನಸಂತ ರ್ಪಣೆ ನೆರವೇರಿತು. ಸಂಜೆ ಸಪ್ತಶತಿ ಪಾರಾಯಣ, ರಾತ್ರಿ ರಂಗಪೂಜೆ, ಮಂಗಳಾರತಿ, ಬಳಿಕ ಪ್ರಸಾದ ವಿತರಿಸ ಲಾಯಿತು. ಆಡಳಿತ ಸಮಿತಿಯ ಅಧ್ಯಕ್ಷರು, ಸದಸ್ಯರು, ಊರ-ಪರವೂರ ಭಕ್ತರು ಪಾಲ್ಗೊಂಡರು.

ಮಿತ್ತಬಾಗಿಲು ಗ್ರಾಮದ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಮಧ್ಯಾಹ್ನ ಕಲ್ಪೋಕ್ತ ಪೂಜೆ, ಬಳಿಕ ಸಪ್ತಶತಿ ಪಾರಾಯಣ, ಮಹಾಪೂಜೆ, ಸಂಜೆ ಭಜನೆ, ರಂಗಪೂಜೆ, ನವದುರ್ಗೆ ಯರ ಆರಾಧನೆ ಜರಗಿತು.

ಮಿತ್ತಬಾಗಿಲು ಗ್ರಾಮದ ಕೊಲ್ಲಿ ಶ್ರೀ ದುರ್ಗಾದೇವಿ ಕ್ಷೇತ್ರ, ನ್ಯಾಯತರ್ಪು ಗ್ರಾಮದ ನಾಳ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರ, ಲಾೖಲ ಓಡದಕರಿಯ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರ, ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ನವರಾತ್ರಿ ವಿಶೇಷ ಪೂಜೆ ಜರಗಿತು.

ಮೇಲಂತಬೆಟ್ಟು ಶ್ರೀ ದೇವೀ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ಬ್ರಹ್ಮಶ್ರೀ ವೇ| ಮೂ| ಶ್ರೀಪಾದ ಪಾಂಗಣ್ಣಾಯ ತಂತ್ರಿಯವರ ನೇತೃತ್ವದಲ್ಲಿ ಬೆಳಗ್ಗೆ 6ರಿಂದ ವಿಶೇಷ ಪೂಜೆ ಜರಗಿತು.

Advertisement

ಶ್ರೀಕ್ಷೇತ್ರ ಧರ್ಮಸ್ಥಳ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಬೆಳಗ್ಗೆ ಎಂದಿನಂತೆ ದೇವರಿಗೆ ಅಭಿಷೇಕ, ಪೂಜೆ ಜರಗಿತು.

ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸಮ್ಮುಖದಲ್ಲಿ ಕನ್ನಿಕಾ ಪೂಜೆ ನೆರವೇರಿತು. ಪಾರ್ವತಿ ಅಮ್ಮನವರ ಉತ್ಸವ, ಸಂಜೆ ಬಲಿ ಉತ್ಸವ, ಕಟ್ಟೆಪೂಜೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next