Advertisement

Navratri Festival ಇಂದಿನಿಂದ ನವರಾತ್ರಿ ಸಂಭ್ರಮ, ಸಡಗರ

10:36 PM Oct 14, 2023 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಅ.15ರಿಂದ ನವರಾತ್ರಿ ಸಂಭ್ರಮ ಆರಂಭಗೊಳ್ಳಲಿದ್ದು ವಿವಿಧ ದೇವಾಲಯಗಳು ಭಕ್ತ ಸಡಗರಕ್ಕೆ ಸಾಕ್ಷಿಯಾಗಲಿದೆ. ದೇವಾಲಯಿಗಳನ್ನು ವಿದ್ಯುತ್‌ ದೀಪ, ಹೂವು, ತಳಿರು ತೋರಣಗಳಿಂದ ಅಲಂಕರಿಸಿ ಶೃಂಗರಿಸಲಾಗಿದೆ.

Advertisement

ದ.ಕ. ಜಿಲ್ಲೆಯ ಪುರಾಣ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸೇರಿದಂತೆ ವಿವಿಧ ದೇವಿ ಆಲಯಗಳಲ್ಲಿ ನವರಾತ್ರಿಯ ವಿಶೇಷ ಪೂಜೆ ನೆರವೇರಲಿದೆ.

“ಮಂಗಳೂರು ದಸರಾ’ ಎಂದು ಪ್ರಸಿದ್ಧಿ ಪಡೆದಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ಆಚರಣೆಯಾಗಲಿದ್ದು, ಅ.15ರಂದು ಬೆಳಗ್ಗೆ ಶಾರದೆ, ಗಣಪತಿ ಸಹಿತಿ ನವದುರ್ಗೆಯವರ ಮೂರ್ತಿ ಪ್ರತಿಷ್ಠಾಪನೆ ನಡೆದು, ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಮುಂದಿನ ಹತ್ತು ದಿನಗಳ ಕಾಲ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.

ಉಡುಪಿ: ವಿವಿಧೆಡೆ ಸಿದ್ಧತೆ
ಉಡುಪಿ: ಜಿಲ್ಲೆಯಾದ್ಯಂತ ರವಿವಾರದಿಂದ ನವರಾತ್ರಿ ಉತ್ಸವ ನಡೆಯ ಲಿದ್ದು ದೇವಿ ದೇವಸ್ಥಾನಗಳು ಸಹಿತ ವಿವಿಧ ದೇವಸ್ಥಾನಗಳಲ್ಲಿ ಕಾರ್ಯಕ್ರಮಗಳು ಬೆಳಗ್ಗಿನಿಂದಲೇ ಆರಂಭವಾಗಲಿದೆ.

ನವರಾತ್ರಿ ಹಿನ್ನೆಲೆಯಲ್ಲಿ ಶನಿವಾರ ವ್ಯಾಪಾರ ವಹಿವಾಟು ಹೆಚ್ಚಳ ಕಂಡುಬಂತು. ಈ ಸಂದರ್ಭ ಹೆಚ್ಚಿನ ಕಡೆ ಕದಿರು ಕಟ್ಟುವ ಕಾರ್ಯಕ್ರಮ ನಡೆಯುವ ಕಾರಣ ಕದಿರು ಮಾರಾಟ ಜೋರಾಗಿಯೇ ನಡೆಯಿತು. ಮತ್ತೂಂದೆಡೆ ಹೂವಿನ ಮಾರಾಟವೂ ಹೆಚ್ಚಳ ಕಂಡುಬಂತು. ರಥಬೀದಿ ಸಹಿತ ನಗರದಲ್ಲಿ ಹೂವಿನ ವ್ಯಾಪಾರವೂ ಉತ್ತಮವಾಗಿತ್ತು.

Advertisement

ನವರಾತ್ರಿಯ ಸಂದರ್ಭ ವಿವಿಧ ವಸ್ತುಗಳ ಖರೀದಿ ಪ್ರಕ್ರಿಯೆಗಳು ನಡೆಯಲಿವೆ. ವಾಹನ, ಚಿನ್ನಾಭರಣ, ಸಹಿತ ಮದುವೆ ಸಹಿತ ಇನ್ನಿತರ ಶುಭಕಾರ್ಯಗಳು ಇನ್ನು ನಿರಂತರವಾಗಿ ನಡೆಯಲಿವೆ. ಈಗಾಗಲೇ ವಿವಿಧ ವಾಣಿಜ್ಯ ಮಳಿಗೆಗಳು ಬಗೆಬಗೆಯ ಕೊಡುಗೆಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲು ನಾನಾ ತಂತ್ರಗಳನ್ನು ಅನುಸರಿಸುತ್ತಿವೆ.

ಕದಿರು ಕೊರತೆ: ನವರಾತ್ರಿಯಲ್ಲಿ ಕದಿರು ಕಟ್ಟುವ ಸಂಪ್ರದಾಯ ಮನೆ ಮನೆಗಳಲ್ಲಿರು ತ್ತವೆ. ಈ ಬಾರಿ ಭಾರೀ ಮಳೆ ಅಕಾಲಿಕವಾಗಿ ಬಂದ ಕಾರಣ ಹಲವೆಡೆ ನಾಟಿ ಕಾರ್ಯ ವಿಳಂಬವಾಯಿತು. ಇನ್ನು ಹಲವೆಡೆ ಮಳೆ ಯಿಂದ ಬೆಳೆ ನಷ್ಟವಾಯಿತು ಇಲ್ಲವೆ ನಾಟಿ ಮಾಡಿದ ಬಳಿಕ ತೆನೆ ಸರಿಯಾಗಿ ಬೆಳೆ ಯಲಿಲ್ಲ. ಹೋದ ವರ್ಷ ನವರಾತ್ರಿಯಲ್ಲಿ ಕದಿರು ಕಟ್ಟಲು ಯಾವುದೇ ಸಮಸ್ಯೆಯಾಗಿರಲಿಲ್ಲವಾದರೆ ಈ ಬಾರಿ ಕದಿರು ಕಟ್ಟಲು ಕದಿರುಗಳ ಕೊರತೆಯಾ ಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next