Advertisement
ಥಾಣೆಯ ಕಾಶಿನಾಥ್ ಘಾಣೇಕರ್ ಸಭಾಗೃಹದಲ್ಲಿ ನಡೆದ ನವೋದಯ ಕನ್ನಡ ಸೇವಾ ಸಂಘದ ಸುವರ್ಣ ಮಹೋತ್ಸವ ಸರಣಿ ಕಾರ್ಯಕ್ರಮ-6 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ತುಳು-ಕನ್ನಡಿಗರು ಎಂಬ ಅಭಿಮಾನದೊಂದಿಗೆ ಮರಾಠಿ ಮಣ್ಣನ್ನು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ನಾವು ಮರಾಠಿ ಮಣ್ಣಿನಲ್ಲಿ ಬೆಳೆದರು ಕೂಡಾ ತುಳುನಾಡಿನವಳು ಎಂಬ ಅಭಿಮಾನ ನನಗಿದೆ. ಮರಾಠಿ ಸಂಸ್ಕೃತಿಯೊಂದಿಗೆ ತುಳುನಾಡ ಸಂಸ್ಕೃತಿ-ಸಂಸ್ಕಾರವನ್ನು ಆರಾಧಿಸುತ್ತೇನೆ. ತುಳು-ಕನ್ನಡಿಗರು ಮರಾಠಿ ಮಣ್ಣಿನಲ್ಲಿ ಒಗ್ಗಟ್ಟಿನಿಂದ, ಪ್ರೀತಿ, ಗೌರವದಿಂದ ಬಾಳಿ ಸಮಾಜ ಪರ ಕಾರ್ಯಕ್ರಮಗಳಲ್ಲಿ ತೊಡಗಿರುವುದು ಅಭಿಮಾನದ ಸಂಗತಿಯಾಗಿದೆ. ತಾಯ್ನಾಡ ಋಣದೊಂದಿಗೆ ಮರಾಠಿ ಮಣ್ಣಿನ ಋಣ ತೀರಿಸಲು ನಾವು ಮುಂದಾಗಬೇಕು ಎಂದರು.
Related Articles
Advertisement
ಸಮಾರಂಭದಲ್ಲಿ ಸ್ಥಾಪಕ ಹಿರಿಯ ಪದಾಧಿಕಾರಿಗಳನ್ನು, ಪೂರ್ವ ಕಾರ್ಯಕಾರಿ ಸಮಿತಿಯ ಸದಸ್ಯರನ್ನು, ಸಂಘದ ಏಳ್ಗೆಗಾಗಿ ಶ್ರಮಿಸಿ ಅಗಲಿದ ಚೇತನರ ಸ್ಮರಣಾರ್ಥಕವಾಗಿ ಅವರ ಪತ್ನಿ, ಪರಿವಾರದ ಸದಸ್ಯರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು. ಅತಿಥಿ- ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು.
ಸಂಘದ ಗೌರವ ಪ್ರಧಾನ ಕಾರ್ಯ ದರ್ಶಿ ದಯಾನಂದ ಎಸ್. ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಹುಟ್ಟು ,ಬೆಳವಣಿಗೆ, ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮದ ಬಗ್ಗೆ, ನವೋದಯ ಕನ್ನಡ ಸೇವಾ ಸಂಘ ಸಂಚಾಲಕತ್ವದಲ್ಲಿ ನಡೆಯುತ್ತಿರುವ ಹೈಸ್ಕೂಲ್ ಮತ್ತು ಕಾಲೇಜಿನ ವಾರ್ಷಿಕ ಚಟುವಟಿಕೆಗಳನ್ನು, ಶಾಲಾ ವಿದ್ಯಾರ್ಥಿಗಳ ಸಾಧನೆ, ಶಿಕ್ಷಕ ವರ್ಗದ ಪರಿಶ್ರಮದ ಸಂಪೂರ್ಣ ಮಾಹಿತಿ ನೀಡಿದರು.
ಅತಿಥಿ-ಗಣ್ಯರನ್ನು ಗೌರವ ಪ್ರಧಾನ ಕೋಶಾಧಿಕಾರಿ ಸುನೀಲ್ ಎಸ್. ಶೆಟ್ಟಿ, ಉಪಾಧ್ಯಕ್ಷ ಕೇಶವ ಟಿ. ನಾಯಕ್, ಜತೆ ಕಾರ್ಯದರ್ಶಿ ಪ್ರಶಸ್ಥ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ದಯಾನಂದ್ ಬಿ. ಹೆಗ್ಡೆ ಅವರು ಪರಿಚಯಿಸಿದರು. ಅಧ್ಯಕ್ಷ ಜಯ ಕೆ. ಶೆಟ್ಟಿ ಅವರು ಅತಿಥಿ-ಗಣ್ಯರನ್ನು ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆಯನ್ನಿತ್ತು ಗೌರವಿಸಿದರು.
ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ವೇದಿಕೆಯಲ್ಲಿ ಅತಿಥಿ-ಗಣ್ಯರೊಂದಿಗೆ ಸಂಘದ ಪದಾಧಿಕಾರಿಗಳು, ಸಂಘದ ಉಪಾಧ್ಯಕ್ಷ ಕೇಶವ ಟಿ. ನಾಯಕ್ ಹಾಗೂ ನವೋದಯ ಮಾಧ್ಯಮಿಕ ಶಾಲೆಯ ಮುಖ್ಯ ಶಿಕ್ಷಕಿ ಅಜಿತಾ ಪ್ರದೀಪ್ ಕುಮಾರ್ ಮತ್ತು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅನುರಾಧಾ ಅರ್ಜುನ್ ವಾಡ್ಕರ್ ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿಯ ಸದಸ್ಯ ರವಿ ಹೆಗ್ಡೆ ಹೆರ್ಮುಂಡೆ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ದಯಾನಂದ ಎಸ್. ಶೆಟ್ಟಿ ವಂದಿಸಿದರು. ಸಂಘದ ಪದಾಧಿ ಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಯಶಸ್ಸಿಗೆ ಸಹಕರಿಸಿದರು.