ಚಂಡೀಗಢ್: ಹಣದ ಆಸೆಗಾಗಿ ವೃದ್ಧ ತಾಯಿಯನ್ನೇ ನವಜ್ಯೋತ್ ಸಿಂಗ್ ಸಿಧು ಮನೆಯಿಂದ ಹೊರಹಾಕಿದ್ದು, ಸಿಧು ಒಬ್ಬ ಕ್ರೂರ ವ್ಯಕ್ತಿ ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸಿಧು ಹಿರಿಯ ಸಹೋದರಿ ಸುಮನ್ ತೌರ್ ಶುಕ್ರವಾರ(ಜನವರಿ 28) ಆರೋಪಿಸಿದ್ದಾರೆ.
ಇದನ್ನೂ ಓದಿ:ಬಿಎಸ್ ವೈ ಮೊಮ್ಮಗಳ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ?
ಅಮೆರಿಕದಲ್ಲಿ ವಾಸವಾಗಿದ್ದ ಸುಮನ್ ತೌರ್ ಪ್ರಸ್ತುತ ಚಂಡೀಗಢದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 1986ರಲ್ಲಿ ತಂದೆ ತೀರಿಕೊಂಡ ಬಳಿಕ ವೃದ್ಧ ತಾಯಿಯನ್ನು ನವಜ್ಯೋತ್ ಸಿಂಗ್ ಸಿಧು ಮನೆಯಿಂದ ಹೊರಹಾಕಿದ್ದರು ಎಂದು ದೂರಿದರು.
1989ರಂದು ತಮ್ಮ ತಾಯಿ ರೈಲ್ವೆ ನಿಲ್ದಾಣದಲ್ಲಿ ಸಾವನ್ನಪ್ಪಿದ್ದರು. ಆ ಸಮಯದಲ್ಲಿ ನಾವು ತುಂಬಾ ಕಷ್ಟವನ್ನು ಅನುಭವಿಸಿದ್ದೇವೆ. ನನ್ನ ತಾಯಿ ನಾಲ್ಕು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದರು. ನಾನು ಏನೆಲ್ಲಾ ಆರೋಪ ಮಾಡಿದ್ದೇನೋ ಅದಕ್ಕೆ ಅಗತ್ಯವಿರುವ ದಾಖಲೆಗಳಿವೆ ಎಂದು ಸಹೋದರಿ ಸುಮನ್ ತಿಳಿಸಿದ್ದಾರೆ.
ಆಸ್ತಿಗಾಗಿ ಸಿಧು ಸಹೋದರಿ, ತಾಯಿ ಜತೆಗಿನ ಸಂಬಂಧ ಕಡಿದುಕೊಂಡಿದ್ದರು. ನಮ್ಮ ತಂದೆ ನಮಗೆ ಮನೆ, ಜಾಗ ಹಾಗೂ ಪಿಂಚಣಿ ಹಣವನ್ನು ಬಿಟ್ಟು ಹೋಗಿದ್ದರು. ಕೇವಲ ಹಣದ ಆಸೆಗಾಗಿ ಸಿಧು ತಾಯಿಯನ್ನು ಬೀದಿಪಾಲು ಮಾಡಿದ್ದ. ನಮಗೆ ಸಿಧುವಿನ ಯಾವುದೇ ಹಣ ಬೇಕಾಗಿಲ್ಲ ಎಂದು ಸುಮನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ನವಜ್ಯೋತ್ ಸಿಧು ಒಬ್ಬ ಕ್ರೂರ ಮನುಷ್ಯ, 1987ರಲ್ಲಿ ಇಂಡಿಯಾ ಟುಡೇಗೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ಪೋಷಕರಿಂದ ಬೇರ್ಪಟ್ಟಿರುವುದಕ್ಕೆ ಸುಳ್ಳು ಕಾರಣ ನೀಡಿರುವುದಾಗಿ ಸುಮನ್ ಆರೋಪಿಸಿದ್ದಾರೆ. ತಮ್ಮ ತಂದೆಯಿಂದಾಗಿ ತಾಯಿ ಪ್ರತ್ಯೇಕವಾಗಿದ್ದರು ಎಂದು ಹೇಳಿರುವ ಸಿಧು ಅದಕ್ಕೆ ಪುರಾವೆ ನೀಡಬೇಕು ಎಂದು ಸುಮನ್ ತಿರುಗೇಟು ನೀಡಿದ್ದಾರೆ.