Advertisement
ಸುಮಾರು 15 ಲಕ್ಷ ಜನಸಂಖ್ಯೆ ಹೊಂದಿದ ನವಿ ಮುಂಬಯಿಯಲ್ಲಿ ಇದುವರೆಗೆ 2.5 ಲಕ್ಷಕ್ಕೂ ಹೆಚ್ಚಿನ ಜನರ ಕೊರೊನಾ ಪರೀಕ್ಷೆಗಳನ್ನು ನಡೆಸ ಲಾಗಿದೆ. ಮುಂಬರುವ ಅವಧಿಯಲ್ಲಿ ಹೆಚ್ಚು ಹೆಚ್ಚು ನಾಗರಿಕರನ್ನು ಪರೀಕ್ಷಿಸಲು ಮಹಾನಗರ ಪಾಲಿಕೆ ವತಿಯಿಂದ ಪ್ರಯತ್ನಿಸಲಾಗುತ್ತಿದೆ. ಮಹಾನಗರ ಪಾಲಿಕೆ ತನ್ನದೇ ಆದ ಪ್ರಯೋಗಾಲಯ ಪ್ರಾರಂಭಿಸಿದಾಗಿನಿಂದ ನಗರದಲ್ಲಿ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಿದೆ. ನವಿ ಮುಂಬಯಿ ನಗರದ ಬೇಲಾಪುರ, ವಾಶಿ, ನೆರುಲ್, ಕೊಪರ್ ಖೈರ್ನಿ ಮತ್ತು ಐರೋಲಿ ವಿಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ಕಂಡುಬಂದಿದ್ದು, ಎಲ್ಲಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ನೆರೂಲ್ ಪರಿಸರದಲ್ಲಿ ಕಂಡುಬಂದಿದೆ. ಪರೀಕ್ಷೆಗಳನ್ನು ಹೆಚ್ಚಿಸುವುದರೊಂದಿಗೆ ತ್ವರಿತ ಚಿಕಿತ್ಸೆಗಳನ್ನು ಒದಗಿಸುವಂತೆ ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಸೂಚಿಸಿದೆ.
Related Articles
Advertisement
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಓಕ್, ಕಳೆದ ಎರಡು ವಾರಗಳಿಂದ ಬಿಎಂಸಿ ಪ್ರತಿನಿತ್ಯ 13-15 ಸಾವಿರ ಪರೀಕ್ಷೆ ನಡೆಸುತ್ತಿದೆ. ಅತಿ ಕಡಿಮೆ ದರದಲ್ಲಿ ಟೆಸ್ಟ್ ನಡೆಸಲು ನಗರದ ವಿವಿಧ ಪ್ರದೇಶಗಳಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಮುಂಬಯಿ ನಿತ್ಯ 20-24 ಸಾವಿರ ಕೋವಿಡ್ ಪರೀಕ್ಷೆಗಳನ್ನು ನಡೆಸಲೇಬೇಕಿದೆ ಎಂದು ಹೇಳಿದ್ದಾರೆ.
ಡ್ರೈವ್ – ಇನ್ ಟೆಸ್ಟಿಂಗ್ ಸೌಲಭ್ಯಗಳನ್ನು ಕಡ್ಡಾಯವಾಗಿ ಪೂರೈಸಲಾಗುತ್ತದೆ. ಇದಕ್ಕೆ ಇನ್ನಷ್ಟು ಸಹಾಯಧನವನ್ನೂ ನಾವು ನಿರೀಕ್ಷಿಸಿದ್ದೇವೆ. ರಾಜ್ಯ ಸರಕಾರ ಕೂಡ ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ಮಾಸ್ಕ್ಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಕಳೆದ ವಾರ ನಡೆದ ಬಿಎಂಸಿ ಅಧಿಕಾರಿಗಳ ಸಭೆಯಲ್ಲಿ ಕಮಿಷನರ್ ಪ್ರತಿನಿತ್ಯ 20 ಸಾವಿರ ಟೆಸ್ಟ್‌ನ ಟಾರ್ಗೆಟ್ ನೀಡಿದ್ದರು. ಫಿವರ್ ಕ್ಯಾಂಪ್, ಸಂಪರ್ಕ ಪತ್ತೆ, ತ್ವರಿತ ಪರೀಕ್ಷೆಗಳಿಗೆ ಕ್ರಮ ಕೈಗೊಳ್ಳಲು ಹಾಗೂ ಪ್ರತಿ ಅಧಿಕಾರಿಗಳೂ ಒಂದೊಂದು ಕಂಟೈನ್ಮೆಂಟ್ ವಲಯದ ಉಸ್ತುವಾರಿ ಹೊರಲು ಸೂಚಿಸಿದ್ದರು.