ನಾರ್ತಂಪ್ಟನ್: ಅಫ್ಘಾನಿಸ್ಥಾನ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲರ್ ನವೀನ್ ಉಲ್ ಹಕ್ ಅವರು ಇಂಗ್ಲೆಂಡ್ ನ ಟಿ20 ಬ್ಲಾಸ್ಟ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ.
ಲೀಸೆಸ್ಟರ್ ಶೈರ್ ಮತ್ತು ನಾರ್ತಂಪ್ಟನ್ ಶೈರ್ ನಡುವಿನ ಪಂದ್ಯದಲ್ಲಿ ನವೀನ್ ಬ್ಯಾಟಿಂಗ್ ಪವರ್ ತೋರಿದ್ದಾರೆ. ಲೀಸೆಸ್ಟರ್‌ಶೈರ್ ಪರವಾಗಿ ಆಡುವ ನವೀನ್ ಕೇವಲ ಎಂಟು ಎಸೆತಗಳಲ್ಲಿ 25 ರನ್ ಚಚ್ಚಿದ್ದಾರೆ. ಇದರಲ್ಲಿ ಮೂರು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದ್ದಾರೆ.
ಇದನ್ನೂ ಓದಿ:Couple: ಮದುವೆಯ ಮೊದಲ ರಾತ್ರಿಯೇ ದುರಂತ; ಹೃದಯಾಘಾತದಿಂದ ನವ ದಂಪತಿ ಮೃತ್ಯು
ಮೊದಲು ಬ್ಯಾಟಿಂಗ್ ಮಾಡಿದ ಲೀಸೆಸ್ಟರ್‌ಶೈರ್ ತಂಡವು 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 164 ರನ್ ಮಾಡಿದರು. ಗುರಿ ಬೆನ್ನತ್ತಿದ್ದ ನಾರ್ತಂಪ್ಟನ್ ಶೈರ್ ತಂಡವು 18.5 ಓವರ್ ಗಳಲ್ಲಿ ಕೇವಲ ಎರಡು ವಿಕೆಟ್ ನಷ್ಟಕ್ಕೆ ಜಯ ಸಾಧಿಸಿತು.
Related Articles
ನಾರ್ತಂಪ್ಟನ್ ಶೈರ್ ಪರ ಕ್ರಿಸ್ ಲಿನ್ ಭರ್ಜರಿ ಶತಕ ಗಳಿಸಿದರು. 68 ಎಸೆತ ಎದುರಿಸಿದ ಲಿನ್ ಅಜೇಯ 110 ರನ್ ಗಳಿಸಿದರು. ಈ ಇನ್ನಿಂಗ್ಸ್ ನಲ್ಲಿ ಅವರು 13 ಬೌಂಡರಿ ಮತ್ತು ಐದು ಸಿಕ್ಸರ್ ಬಾರಿಸಿದರು.