Advertisement

Odisha: ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಪಡೆದ ನವೀನ್ ಪಟ್ನಾಯಕ್ ರ ಮಾಜಿ ಆಪ್ತ ಕಾರ್ಯದರ್ಶಿ

11:05 AM Oct 24, 2023 | Team Udayavani |

ಹೊಸದಿಲ್ಲಿ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ವಿ.ಕೆ ಪಾಂಡಿಯನ್ ಅವರು ಇದೀಗ ಕ್ಯಾಬಿನೆಟ್ ದರ್ಜೆ ಸ್ಥಾನ ಪಡೆದಿದ್ದಾರೆ. 2000ನೇ ಸಾಲಿನ ಒಡಿಶಾ ಬ್ಯಾಚ್ ನ ಐಎಎಸ್ ಅಧಿಕಾರಿಯಾದ ಅವರು ಒಂದು ದಿನದ ಹಿಂದೆಯಷ್ಟೇ ಆಪ್ತ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಅವರಿಗೆ ಪಟ್ನಾಯಕ್ ಅವರ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವ ದರ್ಜೆ ನೀಡಲಾಗಿದೆ.

Advertisement

ಒಡಿಶಾದ ಸಾಮಾನ್ಯ ಆಡಳಿತ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆ ಹೊರಡಿಸಿದ ಆದೇಶದಲ್ಲಿ ಐಎಎಸ್ ಅಧಿಕಾರಿ ವಿ.ಕೆ ಪಾಂಡಿಯನ್ ಅವರನ್ನು ರಾಜ್ಯ ಸರ್ಕಾರದ 5T (ಪರಿವರ್ತನೆ ಉಪಕ್ರಮಗಳು) ಮತ್ತು ನಬಿನ್ ಒಡಿಶಾ ಯೋಜನೆಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಹೇಳಿದೆ. ಅವರು ಕ್ಯಾಬಿನೆಟ್ ಸಚಿವ ಶ್ರೇಣಿಯನ್ನು ಹೊಂದಿರುತ್ತಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ, ಪಾಂಡಿಯನ್ ಪಕ್ಷಕ್ಕೆ ಸೇರಬಹುದು ಮತ್ತು ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಅವರಿಗೆ ದೊಡ್ಡ ಹೊಣೆಯನ್ನು ನೀಡಬಹುದು ಎಂದು ಸುದ್ದಿಯಾಗಿತ್ತು.

2000ನೇ ಸಾಲಿನ ಒಡಿಶಾ ಬ್ಯಾಚ್ ನ ಐಎಎಸ್ ಅಧಿಕಾರಿಯಾದ ವಿ.ಕೆ ಪಾಂಡಿಯನ್ 2002ರಲ್ಲಿ ಧರ್ಮಗಢ್ ಉಪ ಕಲೆಕ್ಟರ್ ಆಗಿ ವೃತ್ತಿಜೀವನ ಆರಂಭಿಸಿದ್ದರು. ಅವರನ್ನು 2005 ರಲ್ಲಿ ಮಯೂರ್‌ಭಂಜ್‌ ನ ಜಿಲ್ಲಾದಿಕಾರಿಯಾಗಿ ನೇಮಿಸಲಾಯಿತು, ಮತ್ತು ನಂತರ 2007 ರಲ್ಲಿ ಅವರನ್ನು ಗಂಜಾಂನ ಕಲೆಕ್ಟರ್ ಆಗಿ ನೇಮಿಸಲಾಯಿತು. ಗಂಜಾಂನಲ್ಲಿ ಅವರ ಪೋಸ್ಟಿಂಗ್ ಸಮಯದಲ್ಲಿ ಅವರು ಮುಖ್ಯಮಂತ್ರಿಯ ವಿಶ್ವಾಸಾರ್ಹ ಅಧಿಕಾರಿಯಾದರು. 2011 ರಲ್ಲಿ ಮುಖ್ಯಮಂತ್ರಿಗಳ ಕಛೇರಿ ಸೇರಿದ ಪಾಂಡಿಯನ್ ಅವರು ನಂತರ ನವೀನ್ ಪಟ್ನಾಯಕ್ ಅವರ ಖಾಸಗಿ ಕಾರ್ಯದರ್ಶಿಯಾಗಿ ಬಡ್ತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next