ಕೊಲ್ಲೂರು: ವಾಲಿಬಾಲ್ ಅಖಾಡದಲ್ಲಿ ಆಲ್‌ರೌಂಡರ್ ಪ್ರದರ್ಶನದ ಮೂಲಕ ಭರವಸೆಯ ಪ್ರತಿಭೆಯಾಗಿ ಮೂಡಿ ಬಂದಿರುವ ಯುವ ಆಟಗಾರ ನವೀನ್ ಕಾಂಚನ್ ಸೀನಿಯರ್ ನ್ಯಾಷನಲ್ ವಾಲಿಬಾಲ್ ಪಂದ್ಯಾವಳಿಗೆ ಕರ್ನಾಟಕ ರಾಜ್ಯ ತಂಡದಲ್ಲಿ ಆಡುತ್ತಿದ್ದಾರೆ. ಸೆ.27ರಿಂದ ಪಂಜಾಬ್‌ನಲ್ಲಿ ನಡೆಯುತ್ತಿರುವ ಹಿರಿಯರ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಅವರು ಆಡಿದ್ದಾರೆ.
ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನ್ಯಾಗಳಮನೆ ನಿವಾಸಿ ಮಂಜುನಾಥ ಮತ್ತು ರತ್ನ ದಂಪತಿಗಳ ಪುತ್ರರಾಗಿರುವ ಇವರು ಬಿ.ಕಾಂ. ಪದವೀಧರ.
ನವೀನ್ ಕಾಂಚನ್ 6.4 ಅಡಿ ಎತ್ತರದ ಅಜಾನುಬಾಹು ಯುವಕ. ವಾಲಿಬಾಲ್ ಆಟಕ್ಕೆ ಅಗತ್ಯವಿರುವುದು ಕೂಡಾ ನೀಳಕಾಯ. ಗ್ರಾಮೀಣ ಪ್ರದೇಶದ ಈ ಯುವಕ ಪ್ರತಿಭಾನ್ವಿತ ವಾಲಿಬಾಲ್ ಆಟದ ಮೂಲಕವೇ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿರುವ ಹೆಗ್ಗಳಿಕೆ ಪಡೆದಿದ್ದಾರೆ.
ಬೇಡಿಕೆಯ ವಾಲಿಬಾಲ್ ಆಟಗಾ ರನಾಗಿ ಗುರುತಿಸಿಕೊಂಡಿದ್ದಾರೆ. ರಾಷ್ಟ್ರ ದ ಪ್ರತಿಷ್ಠಿತ ಪ್ರಾಯೋಜಕರುಗಳು ಪ್ರಾಯೋಜಿತ ಆಟಗಾರರನ್ನಾಗಿ ಇವರನ್ನು ತಮ್ಮ ತಂಡಕ್ಕೆ ಕರೆಯುತ್ತಿದ್ದಾರೆ.
ನವೀನ್ ವಾಲಿಬಾಲ್‌ನ ಸರ್ವಿಸ್, ಪಾಸಿಂಗ್, ಅಟ್ಯಾಕಿಂಗ್, ಬ್ಲಾಕಿಂಗ್ ವಿಭಾಗಗಳಲ್ಲಿ ತನ್ನದೆಯಾದ ಹಿಡಿತ ಸಾಧಿಸಿದ್ದಾರೆ. ಅದರಲ್ಲಿಯೂ ಅಟ್ಯಾಕಿಂಗ್ ಜಂಪ್ ಸರ್ವಿಸ್‌ನಲ್ಲಿ ಮಿಂಚಿನ ಸರ್ವಿಸ್ ಮಾಡಿ ತಂಡದ ಮುನ್ನೆಡೆಗೆ ಕಾರಣರಾಗುತ್ತಾರೆ. ಇವರಲ್ಲಿ ಅಡಗಿರುವ ವಾಲಿಬಾಲ್ ಸಾಮರ್ಥ್ಯ ಹಾಗೂ ಪ್ರತಿಭೆ ಗಮನಿಸಿದ ತರಬೇತುದಾರರು ಒಳ್ಳೆಯ ತರಬೇತಿ ನೀಡಿ ಸಜ್ಜುಗೊಳಿಸಿದ್ದಾರೆ. ಬಸೂÅರು ಶ್ರೀ ಶಾರದಾ ಕಾಲೇಜಿನ ದೆ„ಹಿಕ ಶಿಕ್ಷಣ ನಿರ್ದೇಶಕ ಸೂರಜ್ ಕುಮಾರ್ ಶೆಟ್ಟಿ ಹಾಗೂ ಕುಂದಾಪುರದ ರಾಷ್ಟ್ರೀಯ ವಾಲಿಬಾಲ್ ಆಟಗಾರ ಮಹಮ್ಮದ್ ಸಮೀರ್ ಮತ್ತು ಸುನಿಲ್ ಕುಮಾರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಪ್ರತಿಭೆಯಾಗಿ ಮೂಡಿ ಬಂದಿದ್ದಾರೆ.
ಕರ್ನಾಟಕ, ಕೇರಳ, ಪುಣೆ, ಮುಂಬಯಿಯಲ್ಲೂ ನಡೆದ ಹಲವಾರು ಅಂತರ್‌ರಾಜ್ಯ ಮಟ್ಟದ ಪ್ರತಿಷ್ಠಿತ ವಾಲಿಬಾಲ್ ಪಂದ್ಯಾಟಗಳಲ್ಲಿಯೂ ಭಾಗವಹಿಸಿ ಉತ್ತಮ ಹೊಡೆತಗಾರ, ಉತ್ತಮ ಸರ್ವಾಂಗೀಣ ಆಟಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಹಿಜಾಣ ಕಿರಿಯ ಪ್ರಾಥಮಿಕ ಶಾಲೆ ಪ್ರಾಥಮಿಕ ಶಿಕ್ಷಣ, ಸ.ಪ.ಪೂ.ಕಾಲೇಜು ವಂಡ್ಸೆ-ನೆಂಪು ಇಲ್ಲಿ ಪದವಿಪೂರ್ವ ಶಿಕ್ಷಣ, ಪ್ರಸ್ತುತ ಶ್ರೀ ಶಾರದಾ ಕಾಲೇಜು ಬಸೂÅರು ಇಲ್ಲಿ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾರೆ. ಹಲವಾರು ಕ್ರೀಡಾ ಪ್ರತಿಭೆಗಳನ್ನು ನೀಡಿದ ಬಸೂÅರು ಶ್ರೀ ಶಾರದಾ ಕಾಲೇಜು ಅಂಗಳ ಪ್ರವೇಶ ಮಾಡುತ್ತಲೇ ಉತ್ತಮ ತರಬೇತಿ, ಪ್ರೋತ್ಸಾಹವೂ ಸಿಗಲಾರಂಭಿಸಿತು. ನಿರಂತರ ಅಭ್ಯಾಸ, ಹುರಿದುಂಬಿ ಸುವಿಕೆಯಿಂದ ನವೀನ್ ಸವ್ಯಸಾಚಿ ಆಟಗಾರನಾಗಿ ಮೂಡಿ ಬರುತ್ತಿದ್ದಾರೆ.
ಚತುರ ಆಟಗಾರ
ಅಂಡರ್ ಸರ್ವಿಸ್, ಜಂಪ್ ಸರ್ವಿಸ್, ಪೊÉàಟಿಂಗ್ ಸರ್ವಿಸ್, ಸ್ಮಾ Âಶ್‌ನಲ್ಲಿ ಡೆ„ವಿಂಗ್, ಸ್ಟ್ರೆಟ್, ಟರ್ನ್ ಸ್ಮಾಶ್‌ಗಳ ಮೂಲಕವೂ ಗಮನ ಸಳೆಯುತ್ತಾರೆ. ಒಟ್ಟಾರೆಯಾಗಿ ಇಡೀ ಅಖಾಡದಲ್ಲಿ ಎದ್ದುಕಾಣುವ ಆಟ ಇವರದ್ದು.
– ಡಾ| ಸುಧಾಕರ ನಂಬಿಯಾರ್