ಮ್ಯಾಂಚೆಸ್ಟರ್: ಭಾರತದ ‘ಅತೀ ವೇಗದ ಬೌಲರ್’ ನವದೀಪ್ ಸೈನಿ ನೆಟ್ ಬೌಲರ್ ಆಗಿ ವಿಶ್ವಕಪ್ ತಂಡವನ್ನು ಸೇರಿಕೊಂಡಿದ್ದಾರೆ.
ನೆಟ್ ಬೌಲರ್‌ಗಳ ಮೂಲ ಯಾದಿಯಲ್ಲಿದ್ದ ಅವರು ಗಾಯಾಳಾದ್ದರಿಂದ ಲಂಡನ್‌ಗೆ ತೆರಳಿರಲಿಲ್ಲ. ಸದ್ಯ ಸೈನಿ ಟೀಮ್ ಇಂಡಿಯಾ ನೆರವಿಗೆ ಲಭಿಸುವ ಏಕೈಕ ನೆಟ್ ಬೌಲರ್. ಇದಕ್ಕೂ ಮೊದಲು ಭಾರತದ ನೆಟ್ ಬೌಲರ್ ಆಗಿದ್ದ ಖಲೀಲ್ ಅಹ್ಮದ್ ವಾಪಸಾಗಿದ್ದು, ವೆಸ್ಟ್ ಇಂಡೀಸ್ ‘ಎ’ ವಿರುದ್ಧದ ಸರಣಿಗಾಗಿ ಭಾರತ ‘ಎ’ ತಂಡವನ್ನು ಕೂಡಿಕೊಳ್ಳಲಿದ್ದಾರೆ.